More

    ಹಾಸನದಲ್ಲಿ ಮತದಾನದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಬೆಳಗಾವಿಯಲ್ಲಿ ಬಿಪಿ ಲೋ ಆಗಿ ವೃದ್ಧೆ ಸಾವು

    ಹಾಸನ/ಬೆಳಗಾವಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ಮತದಾನ ಮಾಡಲು ಆಗಮಿಸಿದ್ದ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಹಾಸನದಲ್ಲಿ ಮತದಾನ ಮಾಡಿ ಹೊರ ಬಂದ‌ ಬಳಿಕ ಜಯಣ್ಣ (49) ಎಂಬುವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಮತ ಕೇಂದ್ರದ ಆವರಣದಲ್ಲೇ ಜನಯ ಕೊನೆಯುಸಿರೆಳೆದರು. ಚಿಕ್ಕೋಲೆ ಗ್ರಾಮದಲ್ಲಿ ಹಕ್ಕು ಚಲಾಯಿಸಿ ಹೊರಗೆ ಬಂದ ಬಳಿಕ ಹೃದಯಾಘಾತಕ್ಕೀಡಾಗಿದ್ದಾರೆ.

    ಅಜ್ಜಿ ಸಾವು

    ಮತ್ತೊಂದು ಪ್ರಕರಣದಲ್ಲಿ ಮತದಾನ ಮಾಡಲು ಬರುತ್ತಿದ್ದ ವೃದ್ಧೆ ಮತದಾನ ಕೇಂದ್ರ ಸಮೀಪದಲ್ಲೇ ಮೃತಪಟ್ಟಿರುವ ಘಟನೆ ಸವದತ್ತಿ ತಾಲೂಕಿನ ಯರ್ಜವಿ ಗ್ರಾಮದಲ್ಲಿ ನಡೆದಿದೆ. ಪಾರವ್ವ ಸಿದ್ನಾಳ (98) ಮೃತ ದುರ್ದೈವಿ. ಮತ ಚಲಾವಣೆಗೆ ಬಂದಾಗ ಬಿಪಿ ಲೋ ಆಗಿದ್ದರಿಂದ ಮೃತಪಟ್ಟಿದ್ದಾರೆ.

    ಇದನ್ನು ಓದಿ: ಕುಟುಂಬ ಸಮೇತ ಕೇತಗಾನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ

    ರಾಜ್ಯದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 20.94% ರಷ್ಟು ಮತದಾನ ನಡೆದಿದೆ. ಕೇವಲ 4 ಗಂಟೆಗಲ ಅವಧಿಯಲ್ಲಿ ಈ ಪ್ರಮಾಣವನ್ನು ತಲುಪಿದ್ದು, ಮತದಾನ ಪ್ರಮಾಣದಲ್ಲಿ ಭಾರೀ ಏರಿಕೆ ಸೂಚನೆ ಸಿಕ್ಕಿದೆ.

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಜಾವಗಲ್​ ಶ್ರೀನಾಥ್, ರಾಹುಲ್​ ಡ್ರಾವಿಡ್​ರಿಂದ ಮತದಾನ

    ಮತ ಚಲಾಯಿಸಿದ ಶಿವರಾಜ್ ಕುಮಾರ್ ದಂಪತಿ; ದೊಡ್ಮನೆ ದಂಪತಿಯಿಂದ ಯುವಕರಿಗೆ ಸಂದೇಶ

    ಹುಟ್ಟೂರಿನಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ; ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts