ಸ್ಪಂದನಾ ಪಾರ್ಥಿವ ಶರೀರ ಇನ್ನೇನು ಆಗಮನ; ನಿವಾಸದ ಬಳಿ ಜಮಾಯಿಸುತ್ತಿರುವ ಜನ

Spandana
Published on

ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್​ನಿಂದ ಇನ್ನೇನು ಬೆಂಗಳೂರಿಗೆ ವಿಮಾನದ ಮೂಲಕ ಕರೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಂದನಾ ನಿವಾಸದ ಬಳಿ ಜನರು ಜಮಾಯಿಸತೊಡಗಿದ್ದಾರೆ.

ಸ್ಪಂದನಾ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರದ ಸ್ಪಂದನಾ ನಿವಾಸದ ಎದುರು ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸಂಬಂಧಿಕರು, ಬಂಧು-ಬಳಗ ಸೇರಿದಂತೆ ಬಹಳಷ್ಟು ಮಂದಿ ಸೇರಲಾರಂಭಿಸಿದ್ದಾರೆ. ಪಾರ್ಥಿವ ಶರೀರವನ್ನು ತರಲು ದೊಡ್ಡಪ್ಪ ಬಿ.ಕೆ.ಹರಿಪ್ರಸಾದ್ ಹಾಗೂ ಮಾವ ಚಿನ್ನೇಗೌಡ ವಿಮಾನನಿಲ್ದಾಣಕ್ಕೆ ತೆರಳಿದ್ದಾರೆ.

ಇತ್ತ ಮನೆ ಬಳಿ ಸಹೋದರ ರಕ್ಷಿತ್ ಪ್ರತಿಯೊಂದೂ ಸಿದ್ಧತೆಯನ್ನು ನೋಡಿಕೊಳ್ಳುತ್ತಿದ್ದು, ಅಂತಿಮ‌ ದರ್ಶನದ ಸಿದ್ಧತೆ ನಡೆದಿದೆ. ಇನ್ನು ಕೆಲವೇ ಸಮಯದಲ್ಲಿ ಸ್ಪಂದನಾ ಪಾರ್ಥಿವ ಶರೀರವನ್ನು ತರಲಿದ್ದು, ಮುಂದಿನ ವಿಧಿ-ವಿಧಾನದ ಕುರಿತು ಆ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net