ಪೇಮೆಂಟ್ ಸಾಫ್ಟ್​ವೇರ್ ಹ್ಯಾಕ್: 16.67 ಕೋಟಿ ರೂ. ಕನ್ನ; ಟೆಕ್ಕಿಯಿಂದ ಬೆತ್ತಲೆ ಗ್ಯಾಂಗ್ 1.14 ಕೋಟಿ ಸುಲಿಗೆ

Hack
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಕ್ತಸಹಿತ ಅಪರಾಧಗಳು ಕ್ಷೀಣಿಸುತ್ತಿದ್ದು, ಮುಖರಹಿತ, ಸ್ಥಳರಹಿತ, ಗಡಿರಹಿತ, ಅನಾಮಿಕ ಕ್ರೖೆಂಗಳ ಸಂಖ್ಯೆ ಹೆಚ್ಚಾಗಿವೆ. ಸಿಲಿಕಾನ್ ಸಿಟಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಖಾಸಗಿ ಕಂಪನಿಯ ಡೇಟಾ ಹ್ಯಾಕ್ ಮಾಡಿ 16.67 ಕೋಟಿ ರೂ. ಸೈಬರ್ ಕಳ್ಳರು ದೋಚಿದ್ದರೆ ಮತ್ತೊಂದು ಕೇಸಿನಲ್ಲಿ ಬೆತ್ತಲೆ ಗ್ಯಾಂಗ್ ಸಾಫ್ಟ್​ವೇರ್ ಇಂಜಿನಿಯರ್​ಗೆ ಬ್ಲಾ್ಯಕ್​ವೆುೕಲ್ ಮಾಡಿ 1.14 ಕೋಟಿ ರೂ. ಸುಲಿಗೆ ಮಾಡಿದೆ.

ಕಲ್ಯಾಣನಗರದ ಎಚ್​ಆರ್​ಬಿಆರ್ ಲೇಔಟ್​ನಲ್ಲಿ ಇರುವ ಓಮ್ನಿವೇರ್ ಟೆಕ್ನಾಲಜಿಸ್ ಪ್ರೖೆ.ಲಿ. ಅಧಿಕಾರಿ ವಿನಾಯ್ ಚಂದ್ರಕಾಂತ್, ಸಾಫ್ಟ್​ವೇರ್ ಹ್ಯಾಕ್ ಮಾಡಿ 16.67 ಕೋಟಿ ರೂ. ದೋಚಿರುವ ಸಂಬಂಧ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಓಮ್ನಿವೇರ್ ಟೆಕ್ನಾಲಜಿಸ್ ಪ್ರೖೆ.ಲಿ. ಕಂಪನಿ ಪ್ರೋಟೆಕ್ಟೆಡ್ ಸಾಫ್ಟ್​ವೇರ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಕಂಪನಿಯಾಗಿದೆ. ಅಂದರೇ ಪೇಮೆಂಟ್ ಟೆಕ್ನಾಲಜಿ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿ 4 ಕಂಪನಿಗಳಿಗೆ ಒದಗಿಸಿರುತ್ತದೆ. ಈ ನಾಲ್ಕು ಗ್ರಾಹಕರ ಹಣಕಾಸು ವ್ಯವಹಾರವನ್ನು ರಕ್ಷಣೆ ಮಾಡುವುದು ಈ ಸಾಫ್ಟ್​ವೇರ್ ಕೆಲಸವಾಗಿದೆ. ಆದರೆ, ಅಪರಿಚಿತರು ಈ ಪೇಮೆಂಟ್ ಟೆಕ್ನಾಲಜಿ ಸಾಫ್ಟ್​ವೇರ್​ನ್ನು ಹ್ಯಾಕ್ ಮಾಡಿ 4 ಗ್ರಾಹಕ ಕಂಪನಿಗಳಿಗೆ ಸೇರಿದ ಬ್ಯಾಂಕ್ ಖಾತೆಯಿಂದ ಜೂ.9 ಮತ್ತು 10ರಂದು 16.67 ಕೋಟಿ ರೂಪಾಯಿಯನ್ನು ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ವಂಚನೆ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ವಿನಯ್ ಚಂದ್ರಕಾಂತ್ ಮನವಿ ಮಾಡಿದ್ದಾರೆ. ಇದರ ಮೇರೆಗೆ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆತ್ತಲೆ ಗ್ಯಾಂಗ್​ನಿಂದ 1.14 ಕೋಟಿ ಸುಲಿಗೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್​ಗೆ ವಿಡಿಯೋ ಕಾಲ್ ಮಾಡಿ ಹಣ ಬ್ಲಾ್ಯಕ್​ವೆುೕಲ್ ಮಾಡಿದ್ದ ಬೆತ್ತಲೆ ಗ್ಯಾಂಗ್, ಟೆಕ್ಕಿಗೆ ಬೆದರಿಸಿ 1.14 ಕೋಟಿ ದೋಚಿದ್ದಾರೆ.

ಕೆ.ಆರ್.ಪುರದ ಅನ್ನಸಂದ್ರದ 41 ವರ್ಷದ ಸಾಫ್ಟ್ ವೇರ್ ಇಂಜಿನಿಯರ್, ಇಂಗ್ಲೆಂಡ್​ನಲ್ಲಿನ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡಿ ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಮದುವೆ ಆಗುವ ಉದ್ದೇಶದಿಂದ ಮ್ಯಾಟ್ರಿಮೋನಿಯಲ್ ವೆಬ್​ಸೈಟ್​ಗೆ ತನ್ನ ಸ್ವವಿವರ ನಮೂದು ಮಾಡಿದ್ದರು. ಇಲ್ಲಿಂದ ಮೊಬೈಲ್ ನಂಬರ್ ಪಡೆದ ಮಹಿಳೆ, ಜು.2ರಂದು ಟೆಕ್ಕಿಗೆ ಕರೆ ಮಾಡಿ ಮದುವೆ ವಿಷಯ ಪ್ರಸ್ತಾಪಿಸಿದ್ದಾಳೆ. ತನ್ನ ತಂದೆ ಸಾವನ್ನಪ್ಪಿದ್ದು, ತಾಯಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿಕೊಂಡು ಸಂಭಾಷಣೆ ಶುರು ಮಾಡಿದ್ದಳು. ಜುಲೈ 4ರಂದು ತಾಯಿಗೆ ಔಷಧ ತರಬೇಕು 1500 ರೂ. ಬೇಕೆಂದು ಆನ್​ಲೈನ್​ನಲ್ಲಿ ಪಡೆದಿದ್ದಳು. ಅಂದೇ ತಡರಾತ್ರಿ 12 ಗಂಟೆಗೆ ಟೆಕ್ಕಿಗೆ ವಿಡಿಯೋ ಕಾಲ್ ಮಾಡಿದ ಮಹಿಳೆ, ನಗ್ನವಾಗಿ ವರ್ತಿಸಿದ್ದಳು. ಇತ್ತ ಟೆಕ್ಕಿ ನೋಡುತ್ತಿದ್ದ ವಿಡಿಯೋವನ್ನು ಸಂಪೂರ್ಣ ರೆಕಾರ್ಡ್ ಮಾಡಿಕೊಂಡಿದ್ದಳು. ವಿಡಿಯೋ ಕಾಲ್ ಸ್ಥಗಿತ ಮಾಡಿದ ಮಹಿಳೆ, ಸ್ವಲ್ಪ ಹೊತ್ತಿಗೆ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋವನ್ನು ವಾಟ್ಸ್​ಆಪ್​ಗೆ ಕಳುಹಿಸಿ ಹಣಕ್ಕೆ ಬೇಡಿಕೆ ಒಡ್ಡಿದ್ದಳು. ಕೊಡದೆ ಇದ್ದರೆ ನಿಮ್ಮ ತಂದೆ-ತಾಯಿ ಮೊಬೈಲ್​ಗೆ ಕಳುಹಿಸುವುದಾಗಿ ಬ್ಲಾ್ಯಕ್​ವೆುೕಲ್ ಮಾಡಿದ್ದಳು. ಹಣ ಕೊಡಲು ಒಪ್ಪಿಕೊಂಡ ಟೆಕ್ಕಿ, ದಿಕ್ಕು ತೋಚದೆ ವಂಚಕಿ ಕೊಟ್ಟ 2 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಲಕ್ಷಗಟ್ಟಲೇ ಹಣ ಪಡೆದ ಮಹಿಳೆ, ಸುಮ್ಮನಾಗದೆ ಮತ್ತೆ ಮತ್ತೆ ಬೆದರಿಸಿ 1.14 ಕೋಟಿ ರೂ. ಸುಲಿಗೆ ಮಾಡಿದ್ದಾಳೆ. ನೊಂದ ಟೆಕ್ಕಿ, ವೈಟ್​ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆರೋಪಿ ಸಾನ್ವಿ ಅರೋರಾ ಎಂಬಾಕೆ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳಲ್ಲಿ 6 ಸಾವಿರ ಕೇಸ್: ರಾಜಧಾನಿಯಲ್ಲಿ ಕೇವಲ 6 ತಿಂಗಳಲ್ಲಿ (2023ರ ಜೂನ್) 6226 ಸೈಬರ್ ಕ್ರೖೆಂ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2017ರಲ್ಲಿ 2742 ಪ್ರಕರಣ, 2018ರಲ್ಲಿ 5252 ಪ್ರಕರಣ 2019ರಲ್ಲಿ 10553 ಪ್ರಕರಣ ಮತ್ತು 2022ರಲ್ಲಿ 9940 ಕೇಸ್ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net