

anjali raghav : ಭೋಜ್‌ಪುರಿ ನಟ ಪವನ್ ಸಿಂಗ್ ವೇದಿಕೆ ಮೇಲೆ ನಟಿ ಅಂಜಲಿ ರಾಘವ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪವನ್ ವಿರುದ್ ಆಕ್ರೋಶ ಹೊರ ಹಾಕಿದ್ದರು. ನಟಿ ಈ ವಿಚಾರವಾಗಿ ಮನನೊಂದು ಇನ್ಮುಂದೆ ಭೋಜ್‌ಪುರಿ ಸಿನಿಮಾದಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆ ಮೇಲಿದ್ದ ನಟಿ ಅಂಜಲಿ ಮೈಕ್‌ನಲ್ಲಿ ಮಾತನಾಡುತ್ತಿರುವಾಗ, ಪವನ್ ಸಿಂಗ್ ಅವರ ಸೊಂಟವನ್ನು ಮುಟ್ಟಿದರು. ಅಂಜಲಿಗೆ ತಕ್ಷಣ ಇರುಸು ಮುರುಸು ಆಯಿತ್ತು, ಪವನ್ ಸಿಂಗ್ ಮತ್ತೆ ಅದೇ ರೀತಿ ಮಾಡಿದಾಗ ಅವರು ಇನ್ನಷ್ಟು ಮುಜುಗರಕ್ಕೊಳಗಾದರು. ಸಾವಿರಾರು ವೀಕ್ಷಕರ ಮುಂದೆ ನಟಿಯೊಬ್ಬರ ಬಳಿ ಈ ರೀತಿ ವರ್ತಿಸಿದ್ದು ಪವನ್ ಸಿಂಗ್ ಅವರ ಖ್ಯಾತಿಗೆ ಧಕ್ಕೆ ತಂದಿದೆ. ವೇದಿಕೆಯಲ್ಲಿ ಮಹಿಳೆಯೊಬ್ಬರ ಬಗ್ಗೆ ಅಗೌರವದಿಂದ ವರ್ತಿಸಿದ್ದಕ್ಕಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ನಟಿ ಈ ಕುರಿತಾಗಿ ಬೇಸರ ಹೊರ ಹಾಕಿದ್ದಾರೆ.
ಈ ಘಟನೆ ತನಗೆ ತುಂಬಾ ನೋವುಂಟು ಮಾಡಿದೆ ಮತ್ತು ಅಂದಿನಿಂದ ತಾನು ಅದರಿಂದ ಬಳಲುತ್ತಿದ್ದೇನೆ. ಆ ಸಮಯದಲ್ಲಿ ಪವನ್ ಸಿಂಗ್ ಅವರನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಭೋಜ್‌ಪುರಿ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ಘಟನೆ ಹರಿಯಾಣದಲ್ಲಿ ನಡೆದಿದ್ದರೆ, ಅಲ್ಲಿನ ಜನರು ಪವನ್ ಸಿಂಗ್‌ಗೆ ಸರಿಯಾದ ಶಿಕ್ಷಣವನ್ನು ನೀಡುತ್ತಿದ್ದರು. ಆದರೆ ಲಕ್ನೋ ತನ್ನ ಊರು ಅಲ್ಲದ ಕಾರಣ ತಾನು ಅಸಹಾಯಕಳಾಗಿದ್ದೇನೆ. ಈ ಘಟನೆಯು ತಮ್ಮನ್ನು ತೀವ್ರವಾಗಿ ನೋಯಿಸಿದೆ ಮತ್ತು ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುಃಖಕರವಾಗಿದೆ. ನಟರು ಜನರಿಗೆ ಮಾದರಿಯಾಗಿರಬೇಕು, ಆದರೆ ಅಂತಹ ಘಟನೆಗಳನ್ನು ನೋಡುವುದು ಭಯಾನಕವಾಗಿದೆ ಎಂದು ಅವರು ಹೇಳಿದರು.
ಈ ಘಟನೆಯು ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಮಹಿಳಾ ನಟಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಅಂಜಲಿ ಅವರ ನಿರ್ಧಾರವು ಅವರ ಧೈರ್ಯ ಮತ್ತು ಸ್ವಾಭಿಮಾನವನ್ನು ತೋರಿಸುತ್ತದೆ. ಇಂತಹ ಘಟನೆಗಳನ್ನು ಬಹಿರಂಗಪಡಿಸುವ ಮೂಲಕ, ಅವರು ಇತರ ಮಹಿಳಾ ನಟರಿಗೂ ಸಂದೇಶವನ್ನು ರವಾನಿಸಿದ್ದಾರೆ.
ನಟ ಪವನ್ ಇನ್ನಾ ಗ್ರಾಮ್‌ನಲ್ಲಿ, "ಅಂಜಲಿ ಜೀ, ನನ್ನ ಬ್ಯುಸಿ ಶೆಡ್ಯೂಲ್‌ನಿಂದಾಗಿ ನಿಮ್ಮ ಲೈವ್ ನೋಡಲು ಆಗಿರಲಿಲ್ಲ. ಈ ವಿಷಯ ತಿಳಿದಾಗ ನನಗೆ ಬೇಸರವಾಯಿತು. ನಾವು ಕಲಾವಿದರಾಗಿರುವುದರಿಂದ ನನಗೆ ನಿಮ್ಮ ಬಗ್ಗೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ನನ್ನ ನಡವಳಿಕೆಯಿಂದ ನಿಮಗೆ ನೋವುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.
ಪವನ್ ಅವರ ಕ್ಷಮೆಗೆ ಪ್ರತಿಕ್ರಿಯಿಸಿರುವ ಅಂಜಲಿ, "ಪವನ್ ಸಿಂಗ್ ಜಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. ಅವರು ನನಗಿಂತ ಹಿರಿಯರು ಮತ್ತು ಹಿರಿಯ ಕಲಾವಿದರು. ನಾನು ಅವರನ್ನು ಕ್ಷಮಿಸಿದ್ದೇನೆ. ಈ ವಿಷಯವನ್ನು ನನಗೆ ಮುಂದೆ ತೆಗೆದುಕೊಂಡು ಹೋಗಲು ಇಷ್ಟವಿಲ್ಲ” ಎಂದಿದ್ದಾರೆ.