

Pawan Singh : ಭೋಜ್‌ಪುರಿ ನಟ ಪವನ್ ಸಿಂಗ್ ವೇದಿಕೆ ಮೇಲೆ ನಟಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪವನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆ ಮೇಲಿದ್ದ ನಟಿ ಅಂಜಲಿ ಮೈಕ್‌ನಲ್ಲಿ ಮಾತನಾಡುತ್ತಿರುವಾಗ, ಪವನ್ ಸಿಂಗ್ ಅವರ ಸೊಂಟವನ್ನು ಮುಟ್ಟಿದರು. ಅಂಜಲಿಗೆ ತಕ್ಷಣ ಇರುಸು ಮುರುಸು ಆಯಿತ್ತು, ಪವನ್ ಸಿಂಗ್ ಮತ್ತೆ ಅದೇ ರೀತಿ ಮಾಡಿದಾಗ ಅವರು ಇನ್ನಷ್ಟು ಮುಜುಗರಕ್ಕೊಳಗಾದರು.
ಸಾವಿರಾರು ವೀಕ್ಷಕರ ಮುಂದೆ ನಟಿಯೊಬ್ಬರ ಬಳಿ ಈ ರೀತಿ ವರ್ತಿಸಿದ್ದು ಪವನ್ ಸಿಂಗ್ ಅವರ ಖ್ಯಾತಿಗೆ ಧಕ್ಕೆ ತಂದಿದೆ. ವೇದಿಕೆಯಲ್ಲಿ ಮಹಿಳೆಯೊಬ್ಬರ ಬಗ್ಗೆ ಅಗೌರವದಿಂದ ವರ್ತಿಸಿದ್ದಕ್ಕಾಗಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಈ ವಿವಾದದ ಬಗ್ಗೆ ಪವನ್ ಸಿಂಗ್ ಇನ್ನೂ ಪ್ರತಿಕ್ರಿಯಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್‌ಗಳು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ನಡವಳಿಕೆಯನ್ನು ಯಾವುದೇ ಸಂದರ್ಭದಲ್ಲೂ ಸ್ವೀಕಾರಾರ್ಹವಲ್ಲ ಎಂದು ಹೇಳುತ್ತಿದ್ದಾರೆ. ಕಲಾವಿದರು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿರಬೇಕು, ಆದರೆ ಇಂತಹ ಘಟನೆಗಳು ಅವರ ಘನತೆಯನ್ನು ಕುಗ್ಗಿಸುತ್ತವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.