

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್, ನಟ ಪವನ್ ಕಲ್ಯಾಣ್ ಅವರ ಮುಂಬರುವ ಚಿತ್ರಗಳಾದ 'ಓಜಿ', 'ಉಸ್ತಾದ್ ಭಗತ್ ಸಿಂಗ್' ಮತ್ತು 'ಹರಿಹರ ವೀರ ಮಲ್ಲು' ಚಿತ್ರಗಳ ಕುರಿತಂತೆ ಹೊಸ ಹೊಸ ಮಾಹಿತಿ ಪಡೆಯುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಈ ಬಾರಿ ಕಾದು ಕಾದು ಕುಪಿತಗೊಂಡ ಫ್ಯಾನ್ಸ್, ಓಜಿ ಚಿತ್ರದ ತಯಾರಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪವನ್ ಕಲ್ಯಾಣ್ ಅವರ 'ಓಜಿ' ಚಿತ್ರದ ಚಿತ್ರೀಕರಣ ಯಾವ ಹಂತದಲ್ಲಿದೆ? ಹೊಸ ವಿಷಯಗಳೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟ ಅಭಿಮಾನಿಗಳಿಗೆ ಚಿತ್ರತಂಡ ಸರಿಯಾದ ಮಾಹಿತಿ ನೀಡಿರಲಿಲ್ಲ. ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿ ಬಳಗಕ್ಕೆ ಇದೀಗ ಚಿತ್ರ ತಯಾರಕರು ಉತ್ತರಿಸಿದ್ದು, ಪವನ್ ತಮ್ಮ ರಾಜಕೀಯ ಬದ್ಧತೆಗಳಲ್ಲಿ ನಿರತರಾಗಿರುವ ಕಾರಣ ತಾತ್ಕಾಲಿಕವಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಪವನ್ ಕಲ್ಯಾಣ್ ಸದ್ಯ ಎಲೆಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಕಾರಣ 'ಓಜಿ' ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದು ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿ, ಸ್ಪಷ್ಟತೆ ನೀಡಿದೆ. ಈ ಸಿನಿಮಾದಲ್ಲಿ ಪವನ್ಗೆ ನಾಯಕಿಯಾಗಿ ನಟಿ ಪ್ರಿಯಾಂಕಾ ಮೋಹನ್ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಪವನ್ ಕಲ್ಯಾಣ್, ಪ್ರಿಯಾಂಕಾ ಮೋಹನ್, ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್ ದಾಸ್, ಹರೀಶ್ ಉತ್ತಮನ್, ಅಭಿಮನ್ಯು ಸಿಂಗ್ ಮುಂತಾದವರ ತಾರಾಗಣವಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ಈ ಗ್ಯಾಂಗ್‌ಸ್ಟರ್, ಆ್ಯಕ್ಷನ್ ಚಿತ್ರವನ್ನು ನಿರ್ಮಿಸಲಿದ್ದಾರೆ,(ಏಜೆನ್ಸೀಸ್).