

ಹೊಸದಿಲ್ಲಿ: ಸೋಮವಾರ (ಡಿ.11) ಸಂಜೆ ದೆಹಲಿಯ ಶಾದಿಪುರ ಮೆಟ್ರೋ ನಿಲ್ದಾಣದ ಬಳಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆಯ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇದನ್ನೂ ಓದಿ: ಕ್ರಿಕೆಟ್: ರಾಯಲ್ ಪೂಜಾರಿ ಕೊಡಗು ಚಾಂಪಿಯನ್
ಆತ್ಮಹತ್ಯೆ ಮಾಡಿಕೊಳ್ಳುವ ದುರಾಲೋಚನೆಯಿಂದ ಮೆಟ್ರೋ ನಿಲ್ದಾಣದ ಬಳಿಯಿದ್ದ ಸೇತುವೆಯನ್ನು ಹಾರಿ ಪ್ರಾಣತ್ಯಾಗ ಮಾಡಲು ಯತ್ನಿಸಿದ ಮಹಿಳೆಯನ್ನು ಕಂಡ ಸ್ಥಳೀಯ ಸಿಬ್ಬಂದಿಗಳು, ಕೂಡಲೇ ಧಾವಿಸಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಮೆಟ್ರೋ ಸೇತುವೆಯ ಕೆಳಗೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ, ಮೆಟ್ರೋ ಸೇತುವೆಯ ರೇಲಿಂಗ್ ಬಳಿ ಯುವತಿ ಹಾರಲು ಯತ್ನಿಸುವುದನ್ನು ನೋಡಬಹುದು. ಅದೃಷ್ಟವಶಾತ್ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸರು ಮತ್ತು ಮೆಟ್ರೋದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಮಹಿಳೆಯನ್ನು ಕರೆತರುವ ಮೂಲಕ ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಸದ್ಯ ದೆಹಲಿ ಪೊಲೀಸರು ಅಥವಾ ಮೆಟ್ರೋ ಅಧಿಕಾರಿಗಳು ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ,(ಏಜೆನ್ಸೀಸ್).