

Pavitra Punia : ಲವ್ ಯು ಜಿಂದಗಿ, ಸ್ಪ್ಲಿಟ್ಸ್ವಿಲ್ಲಾ, ಯೇ ಹೈ ಮೊಹಬ್ಬತೇ ಮುಂತಾದ ಟಿವಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ನಟಿ ಪವಿತ್ರಾ ಪುನಿಯಾ ಬುಧವಾರ (ಅ.22) ನಿಗೂಢ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಬಗ್ಗೆ ಘೋಷಿಸಿದ್ದಾರೆ.
ಪ್ರೀತಿಯಿಂದ ಬಂಧನಕ್ಕೊಳಗಾಗಿ ಅದನ್ನು ಅಧಿಕೃತಗೊಳಿಸಲಾಗಿದೆ. ಪವಿತ್ರಾ ಪುನಿಯಾ ಶೀಘ್ರದಲ್ಲೇ ಶ್ರೀಮತಿಯಾಗಲಿದ್ದಾರೆ ಎಂದು ಬರೆದುಕೊಂಡ ನಟಿ, ಬೀಚ್ನಲ್ಲಿ ಆಕೆಯ ಪ್ರಿಯಕರ ಪ್ರಪೋಸ್ ಮಾಡಿದ ಚಿತ್ರಗಳೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾಳೆ.
ಇದನ್ನೂ ಓದಿ: Photo Gallery | ದೀಪ್ವೀರ್ ದಂಪತಿಯ ಮುದ್ದು ಮಗಳು ದುವಾಳ ಕ್ಯೂಟ್ ಫೋಟೋಗಳು ಇಲ್ಲಿವೆ… Dua ಮೊದಲ ಫೋಟೋದಲ್ಲಿ ಆಕೆಯ ನಿಶ್ಚಿತ ವರ ಪವಿತ್ರಾಗೆ ಮೊಣಕಾಲೂರಿ ಉಂಗುರ ತೊಡಿಸಿ ಪ್ರಪೋಸ್ ಮಾಡುತ್ತಿರುವುದನ್ನು ನೋಡಬಹುದು. ನಂತರ ಬಿಗಿಯಾಗಿ ಅಪ್ಪಿಕೊಂಡಿರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮತ್ತೆ ಪ್ರೀತಿಯನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡಿದ್ದರು. ಈ ಹಿಂದೆ ಅವರು ನಟ ಬಿಗ್ ಬಾಸ್ 14 ಸ್ಪರ್ಧಿ ಐಜಾಜ್ ಖಾನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 3 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2023ರಲ್ಲಿ ಆ ಸಂಬಂಧವನ್ನು ಅವರು ತೊರೆದಿದ್ದಾರೆ.
ಮಾಜಿ ಪ್ರಿಯಕರನ ಬಗ್ಗೆ ಮಾತನಾಡಿದ ನಟಿ, ನಮ್ಮ ಆಲೋಚನೆಗಳು ಹೊಂದಿಕೆಯಾಗಲಿಲ್ಲ, ನಾವು ಬಹಳಷ್ಟು ಪ್ರಯತ್ನಿಸಿದೆವು. ಮೂರು ವರ್ಷಗಳ ನಂತರವೂ ನಮ್ಮ ಆಲೋಚನೆಗಳು ಹೊಂದಿಕೆಯಾಗಲಿಲ್ಲ. ಇಂತಹ ಸಂಬಂಧವನ್ನು ಏಕೆ ಪಡೆಯಬೇಕು ಎಂದು ಇಬ್ಬರ ಒಮ್ಮತದಿಂದ ಕೊನೆಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಪವಿತ್ರಾ ಹೊಸ ಸಂಗಾತಿಯ ಬಗ್ಗೆ ಮಾತನಾಡಿದ್ದು, "ಅವರು ಅಮೆರಿಕದ ಉದ್ಯಮಿ, ಒಳ್ಳೆಯ ಹಾಗೂ ದಯಾಳು ವ್ಯಕ್ತಿ. ನಾವು ಸ್ವಲ್ಪ ಸಮಯದಿಂದ ಸ್ಥಿರವಾಗಿ ಸಾಗುತ್ತಿದ್ದೇವೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಹಳ ಸಾರ್ವಜನಿಕ ಸಂಬಂಧದ ನಂತರ, ಪವಿತ್ರಾ ತನ್ನ ಹೊಸ ಪ್ರೀತಿಯನ್ನು ಖಾಸಗಿಯಾಗಿಡಲು ಪ್ರಯತ್ನಿಸುತ್ತಿದ್ದಾರೆ, ಈ ಹೊಸ ಅಧ್ಯಾಯವನ್ನು ವಿವೇಚನೆಯಿಂದ ಸ್ವೀಕರಿಸುವಾಗ, ಅಮೆರಿಕ ಮೂಲದ ತನ್ನ ಉದ್ಯಮಿ ನಿಶ್ಚಿತ ವರನ ಗುರುತನ್ನು ಸಾರ್ವಜನಿಕ ದೃಷ್ಟಿಯಿಂದ ರಕ್ಷಿಸಲು ಆಯ್ಕೆ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)