

ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಬಾಲಿವುಡ್ ಸಿನಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಾರೆ. ದೀಪಿಕಾ ಮತ್ತು ರಣವೀರ್ ದಂಪತಿಗೆ ದುವಾ ಹೆಸರಿನ ಮಗಳಿರುವುದು ನಿಮಗೆ ಗೊತ್ತಿದೆ ಅಲ್ವಾ? ಹೌದು, ಗೊತ್ತಿದೆ, ಈಗ್ಯಾಕೆ ಆ ವಿಚಾರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಏಕೆಂದರೆ, ಇದೇ ಮೊದಲ ಬಾರಿಗೆ ದುವಾಳ ಮುಖವನ್ನು ದೀಪ್ವೀರ್ ದಂಪತಿ ಬಹಿರಂಗಪಡಿಸಿದ್ದಾರೆ.
ದೀಪಾವಳಿ ಹಬ್ಬದ ಖುಷಿಯ ಸಂದರ್ಭದಲ್ಲಿ ದೀಪ್ವೀರ್ ದಂಪತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.