ನನ್ನ ಅಮ್ಮನಿಗೆ ಹೀಗೆಲ್ಲಾ ಹೇಳ್ಬೇಡಿ; ಕಾಮೆಂಟ್​​ ಮಾಡುವವರಿಗೆ ಖುಷಿ ಗೌಡ ಕ್ಲಾಸ್​​ | Pavithra gowda

Untitled design (81)
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A1 ಆರೋಪಿಯಾಗಿ ಪವಿತ್ರಾಗೌಡ(Pavithra gowda) ಜೈಲುಪಾಲಾಗಿದ್ದರು. ಇತ್ತೀಚೆಗಷ್ಟೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವುದು ಗೊತ್ತೆ ಇದೆ. ಬಂಧನದ ಬಳಿಕ ಪವಿತ್ರಾ ಮಗಳು ಖುಷಿ ತನ್ನ ತಾಯಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವುದನ್ನು ನೋಡಿದ್ದೇವೆ. ಅಲ್ಲದೆ ಈ ಪ್ರಕರಣದಲ್ಲಿ ಸ್ಯಾಂಡಲ್​​ವುಡ್​​ ನಟ ದರ್ಶನ್​​ ತೂಗುದೀಪ A2 ಆರೋಪಿಯಾಗಿ ಜೈಲುಪಾಲಾಗಿದ್ದರು. ಸದ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್​ ತೂಗುದೀಪ ಅವರಿಗೂ ಜಾಮೀನು ಮಂಜೂರಾಗಿದೆ.

ನಟ ದರ್ಶನ ಅವರ ಈ ಸ್ಥಿತಿಗೆ ಪವಿತ್ರಾಗೌಡ ಅವರೇ ಕಾರಣ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ್​​ ಅವರು ಕುರಿತು ಅಶ್ಲೀಲ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈ ನೆಗೆಟಿವ್​ ಕಾಮೆಂಟ್​ಗಳಿಂದ ಬೇಸತ್ತಿರುವ ಪವಿತ್ರಾಗೌಡ ಪುತ್ರಿ ಖುಷಿ ಗೌಡ ಟ್ರೋಲರ್​ಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ತನ್ನ ಅಮ್ಮನ ಬಗ್ಗೆ ಈ ರೀತಿ ಅಶ್ಲೀಲವಾಗಿ ಮಾತನಾಡಬೇಡಿ ಎಂದು ಬೇಸರಗೊಂಡಿದ್ದಾರೆ ಈ ಕುರಿತು ಸುದೀರ್ಘ ಪೋಸ್ಟ್​ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಖುಷಿ ಗೌಡ ಹಂಚಿಕೊಂಡಿರುವ ಪೋಸ್ಟ್​​​ನಲ್ಲಿ ಹೀಗಿದೆ. ನಾನು ಈ ರೀತಿ ಪತ್ರ ಬರೆಯುತ್ತೇನೆ ಎಂದು ಊಹಿಸಿರಲಿಲ್ಲ. ಆದರೆ ನಿಮ್ಮ ಪದಗಳು ನನ್ನ ಮನಸ್ಸನು ಘಾಸಿಗೊಳಿಸಿವೆ. ನನ್ನ ತಾಯಿಯ ಬಗ್ಗೆ ಆಡುತ್ತಿರುವ ಚುಚ್ಚುಮಾತುಗಳು ಬೇಸರ ತರಿಸಿದೆ. ನೀವು ನನ್ನ ತಾಯಿಯ ಬಗ್ಗೆ ಆಡುವ ಮಾತುಗಳಿಂದ ಹೃದಯಕ್ಕೆ ಎಷ್ಟು ನೋವಾಗಿದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಅಮ್ಮನ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ಅವಳ ತ್ಯಾಗ, ಕಷ್ಟಗಳು ಕೂಡ ನಿಮಗೆ ಗೊತ್ತಿಲ್ಲ. ಆದರೆ ನಿಮಗೆಲ್ಲಾ ತಿಳಿದಿರುವಂತೆ ಮಾತನಾಡುತ್ತಿದ್ದೀರಿ. ನಿಮ್ಮ ತೀರ್ಪುಗಳಿಗೆ ಯಾವುದೇ ತೂಕವಿಲ್ಲ. ನನ್ನ ತಾಯಿಯ ಬಗ್ಗೆ ನನಗಷ್ಟೆ ಗೊತ್ತು. ಅವಳು ಎಷ್ಟು ಮೌನವಾಗಿ ಜೀವನದಲ್ಲಿ ಹೋರಾಟ ಮಾಡಿದ್ದಾಳೆ ಎಂಬುದನ್ನು ನಾನು ಕಂಡಿದ್ದೇನೆ. ನನ್ನ ತಾಯಿಯೇ ನನ್ನ ಪ್ರಪಂಚ, ನನ್ನ ಶಕ್ತಿ, ನನ್ನ ಪ್ರೇರಣೆ ಹಾಗೂ ಎಲ್ಲವೂ. ಆಕೆ ನನಗೆ ತಾಯಿ ಮಾತ್ರವಲ್ಲ, ನನ್ನ ತಂದೆಯೂ ಕೂಡ. ನನ್ನ ಜೀವನದ ಎಲ್ಲ ಅಗತ್ಯತೆಗಳನ್ನು ಆಕೆ ಈಡೇರಿಸಿದ್ದಾಳೆ. ಪ್ರೀತಿ ಹಾಗೂ ತ್ಯಾಗಕ್ಕೆ ನನ್ನ ತಾಯಿ ಒಂದು ವ್ಯಾಖ್ಯಾನ ಎಂದು ಬಣ್ಣಿಸಿದ್ದಾರೆ.

ನನ್ನ ಅಮ್ಮನನ್ನು ನಾನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವಳು ಎಲ್ಲ ಸಮಸ್ಯೆಗಳ ಜತೆ ಗಟ್ಟಿಯಾಗಿ ಮುನ್ನಡೆಯುತ್ತಾಳೆ. ಅವಳ ಬಗ್ಗೆ ತಿಳಿದುಕೊಳ್ಳದೆ ಏನೇನೋ ಕಾಮೆಂಟ್‌ ಮಾಡುವುದು ಸರಿಯಲ್ಲ. ಇದಕ್ಕಿಂತ ಹೆಚ್ಚು ನನಗೆ ನೋವು ಕೊಡುವುದು ನೀವು ಮಾಡುವ ಆಶ್ಲೀಲ ಮತ್ತು ದ್ವೇಷಕಾರಕ ಕಾಮೆಂಟ್‌ಗಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ಪ್ರಕಾರ ನಾನು ಚಿಕ್ಕವಳಾಗಿರಬಹುದು. ಆದರೆ ನನಗೆ ಎಲ್ಲವೂ ಆರ್ಥವಾಗುತ್ತೆ. ನನಗೆ ಪ್ರಪಂಚದ ಅರಿವು ಇದೆ. ಇದನ್ನು ನಾನು ಹೇಳಿಕೊಳ್ಳಲಾಗದ ರೀತಿಯಲ್ಲಿ ನೋವುಂಟಾಗಿದೆ. ಈ ಭಾರವನ್ನು ನನ್ನಿಂದ ಹೊರಲು ಆಗುತ್ತಿಲ್ಲ. ನನ್ನ ಅಮ್ಮನನ್ನು ಈ ರೀತಿ ಮನಬಂದಂತೆ ಜಡ್ಜ್‌ ಮಾಡುವುದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ತಾಯಿ ಯಾರಿಗೂ ಎಂದಿಗೂ ನೋವು ಕೊಟ್ಟವಳಲ್ಲ. ಅವಳು ಬೇರೆಯವರ ಬಗ್ಗೆಯೂ ಕಾಳಜಿ ವಹಿಸುತ್ತಾಳೆ. ನನ್ನ ತಾಯಿಯ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲದವರು, ಅರ್ಥ ಮಾಡಿಕೊಳ್ಳದವರ ಮಾತುಗಳು ನನ್ನ ಗಮನಕ್ಕೂ ಬಂದಿದೆ. ಇದು ನನಗೆ ಬಹಳ ನೋವು ಕೊಟ್ಟಿದೆ.

ಆದರೆ ಅವಳು ಯಾವುದಕ್ಕೆ ಅರ್ಹಳಿಲ್ಲವೋ ಆ ರೀತಿ ನೀವು ಬಿಂಬಿಸುತ್ತಿದ್ದೀರಿ. ನನ್ನ ತಾಯಿ ಈ ಜಗತ್ತಲ್ಲೇ ಬೆಸ್ಟ್‌ ಅಮ್ಮ. ಅದೇನೆ ಆಗಿರಲಿ ನಾನು ನನ್ನ ತಾಯಿಯ ಜತೆ ಸದಾ ನಿಲ್ಲುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net