

ಆಗ್ರಾ: ರೈಲ್ವೆ ನಿಲ್ದಾಣದ ಎಸ್ಕಲೇಟರ್‌ನಲ್ಲಿ ತೆರೆಳುತ್ತಿದ್ದ ಪ್ರಯಾಣಿಕರ ಲಗ್ಗೇಜ್ ಸಿಲುಕಿದ ಪರಿಣಾಮ ಅನೇಕರು ಕೆಳಗೆ ಬಿದ್ದ ಘಟನೆ ಆಗ್ರಾ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ನಲ್ಲಿ ವರದಿಯಾಗಿದೆ.
ಎಂದಿನಂತೆ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್ ಸೇವೆ ನೀಡಲಾಗುತ್ತದೆ. ಇದೇ ರೀತಿ ಎಸ್ಕಲೇಟರ್ ಬಳಸಿಕೊಂಡು ಮೇಲಕ್ಕೆ ಹೋಗುತ್ತಿದ್ದ ಇಬ್ಬರು ಪ್ರಯಾಣಿಕರ ಬ್ಯಾಗ್‌ಗಳು ನಿಲ್ದಾಣದ ಎಸ್ಕಲೇಟರ್‌ನಲ್ಲಿ ಸಿಲುಕಿಕೊಂಡಿತು. ಇದರಿಂದ ಅವರ ಹಿಂಬದಿ ಬರುತ್ತಿದ್ದ ಇತರರು ಕೂಡಲೇ ಕೆಳಗೆ ಬಿದ್ದಿದ್ದಾರೆ.
ಇದನ್ನೂ ಓದಿ: ಕೂಡ್ಲಿಗಿ ಕಲಾವಿದರು ಈ ನೆಲದ ಆಸ್ತಿ
ಎಸ್ಕಲೇಟರ್ನೊಳಗೆ ಲಗೇಜ್ ಬ್ಯಾಗ್‌ಗಳು ಸಿಲುಕಿದ ಕೂಡಲೇ ಅದರ ವ್ಯವಸ್ಥೆಯಲ್ಲಿ ತೊಡಕು ಉಂಟಾಗಿದೆ. ಲಗೇಜ್ ಬಿಡಿಸಿಕೊಳ್ಳಲು ಇಬ್ಬರು ಪ್ರಯಾಣಿಕರು ನಡೆಸಿದ ಯತ್ನದ ಬೆನ್ನಲ್ಲೇ ಇತರರ ನಡುವೆ ಗಲಾಟೆ ಬುಗಿಲೆದ್ದಿದೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಘಟನೆಯ ಬಳಿಕ ಎಸ್ಕಲೇಟರ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).