More

    ಕೂಡ್ಲಿಗಿ ಕಲಾವಿದರು ಈ ನೆಲದ ಆಸ್ತಿ

    ಕೂಡ್ಲಿಗಿ: ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೂಡ್ಲಿಗಿ ತಾಲೂಕು ಅನುಪಮ ಕೊಡುಗೆ ನೀಡಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

    ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ತಾಲೂಕು ಆಡಳಿತ, ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತಾನಾಡಿದರು. ರಂಗಭೂಮಿಯ ತವರು ಎನಿಸಿರುವ ಕೂಡ್ಲಿಗಿ ತಾಲೂಕಿನ ಬಯಲಾಟ ಕಲಾವಿದ ಸಿದ್ದಪ್ಪ ದಳವಾಯಿ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

    ರಂಗಕಲೆಯನ್ನು ನಾಡಿಗೆ ಪರಿಚಯಿಸುತ್ತಿರುವ ಸ್ಥಳೀಯ ಕಲಾವಿದರು ಈ ನೆಲದ ಆಸ್ತಿಯಾಗಿದ್ದಾರೆ. ಕನ್ನಡ ಭವನದ ಜಾಗದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಕನ್ನಡ ಜ್ಞಾನ ಭಂಡಾರ (ಡಿಜಿಟಲ್ ಲೈಬ್ರರಿ) ನಿರ್ಮಾಣಕ್ಕೆ ತೀರ್ಮಾನಿಸಿರುವುದಾಗಿ ಶಾಸಕ ಶ್ರೀನಿವಾಸ ತಿಳಿಸಿದರು.

    ಇದಕ್ಕೂ ಮುನ್ನ ಪಟ್ಟಣದಲ್ಲಿ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಧ್ವಜಾರೋಹಣ ನಡೆಸಿ, ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ವಾದ್ಯ ತಂಡಗಳು ಹಾಗೂ ಪಟ್ಟಣದ ನಾನಾ ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ವಾಸವಿ ಶಾಲೆಯ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನ ಸನ್ಮಾನಿಸಲಾಯಿತು.

    ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್, ಜಯ ಕರ್ನಾಟಕ ಸಂಘಟನೆಯ ಬಿ.ರಾಘವೇಂದ್ರ, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಕೆ.ಈಶಪ್ಪ, ಬಿ.ಸರಸ್ವತಿ, ಲಕ್ಷ್ಮೀದೇವಿ, ಪೂರ್ಯ ನಾಯ್ಕ, ಬಾಸೂ ನಾಯ್ಕ, ಲೀಲಾವತಿ, ಎಂ.ಗುರುಸಿದ್ದನಗೌಡ, ಢಾಣಿ ರಾಘವೇಂದ್ರ, ಕೋಗಳಿ ಮಂಜುನಾಥ, ಪ್ರದೀಪ್, ಎ.ಎಂ.ವೀರಯ್ಯ, ಬ್ಯಾಳಿ ವಿಜಯಕುಮಾರ್ ಗೌಡ,ರಿಯಾಜ್ ಪಾಷಾ, ದೇವರಮನಿ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts