More

    ಕೊಳವೆಬಾವಿ ಬಾಡಿಗೆ ಪಡೆಯಿರಿ

    ಕೂಡ್ಲಿಗಿ: ಮುಂದಿನ ದಿನಗಳಲ್ಲಿ ಕುಡಿವ ನೀರಿನ ಕೊರತೆ ಹೆಚ್ಚಾಗಲಿದೆ. ಕೊಳವೆ ಬಾವಿ ಕೊರೆಸಿದರೂ ಸಿಗುವ ಭರವಸೆಯಿಲ್ಲ. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಿರಿ ಎಂದು ಅಧಿಕಾರಿ ಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚನೆ ನೀಡಿದರು.

    ಪಟ್ಟಣದಲ್ಲಿ ಶನಿವಾರ ಬರಪರಿಹಾರ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಕೊಳವೆ ಬಾವಿ ಕೊರೆಸಲು 25 ಲಕ್ಷ ರೂ. ಬಿಡುಗಡೆಯಾಗಿದೆ. ಇದನ್ನು ಕೇವಲ ಕೊಳವೆ ಬಾವಿ ಕೊರೆಸಲು ಬಳಸಬೇಕು. ಹಾಗಂತ ನೀರು ಸಿಗದ ಕಡೆ ಕೊರೆಸುವುದು ಬೇಡ. ಆದಷ್ಟು ರೈತರ ಮನವೊಲಿಸಿ ಅವರಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲವೆಂದು ಕುಳಿತುಕೊಳ್ಳುವಂತಿಲ್ಲ. ಜಲ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ ಎಂದರು.

    ತಾಪಂ ಇಒ ವೈ.ರವಿಕುಮಾರ್ ಮಾತನಾಡಿ, ತಾಲೂಕಿನ 16 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಗೋಶಾಲೆ ಆರಂಭ ಮಾಡುವುದು ಹಾಗೂ ಮೇವು ಸಂಗ್ರಹ ಬಗ್ಗೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಲೋಹಿತ್ ಕುಮಾರ್ ಅವರಿಂದ ಮಾಹಿತಿ ಪಡೆದ ಶಾಸಕ, ಗೋಶಾಲೆ ತೆರೆಯಲು ಗಂಡಬೊಮ್ಮನಹಳ್ಳಿ ಮತ್ತು ಹೊಸಹಳ್ಳಿ ಭಾಗದಲ್ಲಿನ ಕೆರೆಗಳಲ್ಲಿ ನೀರಿನ ಪರಿಸ್ಥಿತಿ ನೋಡಿ ವರದಿ ಕೊಡುವಂತೆ ಸೂಚಿಸಿದರು.

    ತಹಸೀಲ್ದಾರ್ ರಾಜು ಪಿರಂಗಿ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಹಾಗೂ ಕಂದಾಯ ಇಲಾಖೆಯ ಅದಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts