ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಆಶೀರ್ವಚನ ನೀಡಿ ನಮ್ಮ ಸಂಕಲ್ಪದ ಶ್ರೀರಾಮನಾಮ ತಾರಕ ಮಹಾಮಂತ್ರದ ಜಪ ಅಭಿಯಾನಕ್ಕೆ ಚಿತ್ರಾಪುರ ಮಠದ ಕೊಡುಗೆಯೂ ಅನನ್ಯ. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಶ್ರೀಗಳ ಶಿಷ್ಯವೃಂದ ಅವಿರತವಾಗಿ ಶ್ರಮಿಸಿ ಯಶಸ್ಸಿಗೆ ಕಾರಣವಾಗಿದೆ. ಎಲ್ಲಿಯೂ ಗೋಕರ್ಣ ಮಠವೆಂದು ತಾರತಮ್ಯ ಮಾಡದೆ ಸಂಪೂರ್ಣವಾಗಿ ತೊಡಗಿಕೊಂಡು ಶ್ರೀಮಠದ ಹಲವು ಶಷ್ಯರು ಯೋಗದಾನ ನೀಡಿದ್ದಾರೆ. ಅದಕ್ಕೆ ಪರಮಪೂಜ್ಯ ಸ್ವಾಮಿಜಿಗಳಾದ ಶ್ರೀಮದ್ ಶಂಕರಾಶ್ರಮ ಸಧ್ಯೋಜಾತ ಶ್ರೀಗಳು ನೀಡಿದ ಸಂಸ್ಕಾರವೆ ಕಾರಣ. ಈ ಹಿಂದೆಯೂ 525 ನೇ ವರ್ಷದ ಕಾರ್ಯಕ್ರಮಕ್ಕೂ ಶ್ರೀಗಳು ಸಾನಿಧ್ಯ ವಹಿಸಿ ಅಂದಿನ ಕಾರ್ಯಕ್ರಮಕ್ಕೂ ಮೆರಗು ತಂದಿದ್ದರು ಎಂದು ತಮ್ಮ ಪ್ರೀಯ ಗುರುವರ್ಯರನ್ನು ನೆನಸಿಕೊಂಡರು. ಭವ್ಯ, ದಿವ್ಯ ದಕ್ಷಿಣದ ಅಯೋಧ್ಯಾ ಎಂದು ಪ್ರಖ್ಯಾತಗೊಳ್ಳಲು ದಾನಿಗಳು, ಆರ್ಕಿಟೆಕ್ಟಗಳು, ಇಂಜೀನೀಯರಗಳು, ಅಧಿಕಾರಿಗಳು ಸೇರಿದಂತೆ ಸಹಸ್ರಾರು ಜನರ ಶ್ರಮವಿದ್ದು ಇದರ ಶ್ರೇಯವೆನಿದ್ದರೂ ಅದು ಅವರಿಗೆ ಸಲ್ಲಲಿದೆ ಎಂದು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮಠದ ವಾಸ್ತು ನಿರ್ಮಾಣಕ್ಕೆ ಸಹಕಾರ ನೀಡಿದ ಸೇವಾಕರ್ತರಿಗೆ ಉಭಯ ಶ್ರೀಗಳ ಸಾನಿಧ್ಯದಲ್ಲಿ ಗೌರವಾರ್ಪಣೆ ಮಾಡಲಾಯಿತು.