ಡಿಎಆರ್ ಪೊಲೀಸರಿಂದ ಕವಾಯತು

12KDR3
ಕಡೂರಿನಲ್ಲಿ ಡಿಎಆರ್ ತರಬೇತಿ ಪೊಲೀಸರಿಂದ ಕವಾಯತು ಪ್ರದರ್ಶಿಸಿದರು.
Published on

ಕಡೂರು: ಪೊಲೀಸ್ ಸಿಬ್ಬಂದಿ ಶಿಸ್ತು, ಸಂಯಮ ಮೀರದಂತೆ ಜನರ ರಕ್ಷಣೆಗೆ ಧಾವಿಸಲು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಪಟ್ಟಣದಲ್ಲಿ ಮಂಗಳವಾರ ಗಲಾಟೆ ವಿರೋಧಿ ಕವಾಯತು, ಪಥಸಂಚಲನ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ 60ಕ್ಕೂ ಹೆಚ್ಚು ಡಿಎಆರ್ ಪೊಲೀಸರು ಸಮವಸ ಧರಿಸಿದ್ದರು. ಗಲಾಟೆಗಳನ್ನು ನಿಯಂತ್ರಿಸುವ ಬಗ್ಗೆ ಪ್ರದರ್ಶನವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಗೌರಿ-ಗಣೇಶ ಮತ್ತು ಈದ್‌ಮಿಲಾದ್ ಹಬ್ಬಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಿದೆ ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಕಡೂರು ಪಿಎಸ್‌ಐ ಧನಂಜಯ್ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ಆಗದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಬಗ್ಗೆ ಅಭಿಮಾನ ಮತ್ತು ಆತ್ಮಸ್ಥೈರ್ಯ ಮೂಡಿಸಲು ಇಲಾಖೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಪಿಐ ಶಿವಕುಮಾರ್ ಮಾರ್ಗದರ್ಶನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ತರಬೇತಿ ಪೊಲೀಸರಿಂದ ಜಾಥಾ ಹಮ್ಮಿಕೊಳ್ಳಲಾಯಿತು ಎಂದರು.
ಪಿಎಸ್‌ಐಗಳಾದ ಕಿರಣ್‌ಕುಮಾರ್, ಪವಿತ್ರಾ, ರಂಗನಾಥ್, ಸಚಿತ್‌ಕುಮಾರ್, ಮಂಜುಳಾಬಾಯಿ, ಪೊಲೀಸ್ ತಂಡದ ಮುಖ್ಯಸ್ಥರಾದ ಸಹದೇವ್, ಚಿದಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net