ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಬಂದಂತೆ ವರ್ತಿಸಿದ ವಿದ್ಯಾರ್ಥಿ!

ಭುತಕೋಲ
Published on

ಬೆಂಗಳೂರು: ಕಾಲೇಜು ವಾರ್ಷಿಕೋತ್ಸವದಲ್ಲಿ ಕಾಂತಾರ ಸಿನಿಮಾದ ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಪಂಜಿರ್ಲಿ ದೈವ ಅವಾಹನೆ ಆಗಿರವಂತಹ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನಲ್ಲಿ ನಡೆದಿದೆ.

ದ್ವೀತಿಯ ಪಿಯುಸಿಯ ವಿಶಾಲ್ ದೈವ ಅವಾಹನೆಗೆ ಒಳಗಾದ ವಿದ್ಯಾರ್ಥಿ. ವಿಶಾಲ್ ಪಂಜುರ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದ. ದೈವ ಆವಾಹನೆಯಾಗುತ್ತಿದ್ದಂತೆ ವೇದಿಕೆ ಮೇಲಿಂದ ಕೆಳಗೆ ಬಂದು ನರ್ತಿಸಿದ್ದಾನೆ. ಕೂಡಲೇ ಎಚ್ಚೆತ್ತ ನಾಲ್ಕೈದು ಮಂದಿ ಬಂದರೂ ವಿಶಾಲ್​ನನ್ನು ಸಮಾಧಾನಪಡಿಸಲು ಸಾಧ್ಯವಾಗಿಲ್ಲ‌.

ವಿಶಾಲ್ ಮೇಲೆ ದೈವ ಆವಾಹನೆಯಾಗಿ ಉದ್ವೇಗಕ್ಕೆ ಒಳಗಾಗುತ್ತಿದ್ದಂತೆ ಆಯೋಜಕರು ಹಾಡನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ. ವಿದ್ಯಾರ್ಥಿಯ ಆರ್ಭಟ ಕಂಡು ಕಾಲೇಜು ವಾರ್ಷಿಕೋತ್ಸವಕ್ಕೆ ಬಂದಿದ್ದ ನೋಡುಗರು ಶಾಕ್ ಆಗಿದ್ದಾರೆ. ಈ ಘಟನೆ ನಿನ್ನೆ(ಫೆ.11) ತಡರಾತ್ರಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net