ಮಂಡ್ಯ | ವರ್ಗಾವಣೆ ವಿಚಾರಕ್ಕೆ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಲೋಕಾ ಬಲೆಗೆ

Sowmya
Published on

ಮಂಡ್ಯ: ಗ್ರಾಮ ಲೆಕ್ಕಿಗ(Village Accountant) ಹುದ್ದೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆ ಪಾಂಡವಪುರ ತಹಶೀಲ್ದಾರ್ ಸೌಮ್ಯ ಲೋಕಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಹಶೀಲ್ದಾರ್ ಸೌಮ್ಯ ವಿಎ(Village Accountant) ಮರಿಸ್ವಾಮಿ ಅವರಲ್ಲಿ ಗುಮ್ಮನಹಳ್ಳಿಯಿಂದ ದೊಡ್ಡಮೊಮ್ಮನಹಳ್ಳಿಗೆ ವರ್ಗಾವಣೆ ವಿಚಾರವಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ‌ ಬಗ್ಗೆ ಮರಿಸ್ವಾಮಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ತಹಶೀಲ್ದಾರ್ ವಿರುದ್ಧ ಲೋಕಾ ಕಾರ್ಯಾಚರಣೆಗೆ ಇಳಿದಿತ್ತು.

ಕಚೇರಿಯಲ್ಲಿ 40 ಸಾವಿರ ರೂ. ಲಂಚ ಪಡೆಯುವ ವೇಳೆ ತಹಶಿಲ್ದಾರ್ ಸೌಮ್ಯ ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net