2ಡಿ ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ
Published on

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಘೋಷಿಸಿರುವ 2ಡಿ ಮೀಸಲಾತಿಯನ್ನು ಸಂಪೂರ್ಣ ತಿರಸ್ಕರಿಸುವ ನಿರ್ಣಯ ಕೈಗೊಂಡಿದ್ದೇವೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಗಾಂಧಿ ಭವನದಲ್ಲಿ ಪಂಚಮಸಾಲಿ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡುತ್ತಾ, ಸರ್ಕಾರ ಘೋಷಿಸಿರುವ 2 ಡಿ ಮೀಸಲಾತಿಯನ್ನು ಪಂಚಮಸಾಲಿ ಸಮಾಜ ತಿರಸ್ಕರಿಸುತ್ತಿದೆ. ಮುಖ್ಯಮಂತ್ರಿಗಳು 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತಾರೋ ಇಲ್ಲವೋ ಎನ್ನುವುದನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.

ಇದೇ ತಿಂಗಳು 12ನೇ ತಾರೀಖಿನ ಒಳಗಾಗಿ ಮೀಸಲಾತಿ ಹೊರಡಿಸಿ ಗೆಜೆಟ್​​ನಲ್ಲಿ ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಜನವರಿ 13 ರಂದು ಹಾವೇರಿಯಲ್ಲಿರುವ ಮುಖ್ಯಮಂತ್ರಿ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡುತ್ತೇವೆ. ಅವತ್ತೂ ಘೋಷಣೆ ಮಾಡದಿದ್ದರೆ ಮುಂದಿನ ಹೋರಾಟವನ್ನು ಹಾವೇರಿಯಲ್ಲಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

2ಡಿ ಮೀಸಲಾತಿಯನ್ನು ಸಂಪೂರ್ಣ ತಿರಸ್ಕರಿಸುವ ತೀರ್ಮಾನಕ್ಕೆ ಪಂಚಮಸಾಲಿ ಸಮಾಜ ಎಲ್ಲ ಬದ್ಧವಾಗಿದೆ. ನಮಗೆ 2ಎ ಮೀಸಲಾತಿಯಲ್ಲಿದ್ದ ಎಲ್ಲಾ ಸೌಲಭ್ಯ ಕೊಡಬೇಕು. ಸದ್ಯ ಸರ್ಕಾರ ಘೋಷಿಸಿರುವ 2 ಡಿ ಮೀಸಲಾತಿ ಗೊಂದಲಕ್ಕೆ ಕಾರಣವಾಗಿದೆ ಎಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net