ಅಪಹರಣದ ಕಥೆ ಕಟ್ಟಿ ಹಣಕ್ಕಾಗಿ ತಂದೆಗೆ ಬೇಡಿಕೆ ಇಟ್ಟ ಮಗ ಸಿಕ್ಕಿಹಾಕಿಕೊಂಡಿದ್ದು ಹೇಗೆ?

kidnap
Published on

ಮುಂಬೈ: ಇದು ಸಿನಿಮಾದಲ್ಲಿ ಘಟನೆಯಂತಿದೆ. ಯುವಕನೊಬ್ಬ ತನ್ನನು ತಾನೇ ಅಪಹರಿಸಿಕೊಂಡು ತಂದೆಯಿಂದ ಹಣ ಲಪಟಾಯಿಸಲು ಮುಂದಾದ. ಆದರೆ, ಈ ಸಂದರ್ಭದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಸಿಕ್ಕಿಬಿದ್ದಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾನೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 20 ವರ್ಷದ ಯುವಕನೊಬ್ಬ ತನ್ನ ತಂದೆಯಿಂದ ಹಣ ಪಡೆಯಲು ತಾನೇ ಅಪಹರಣಗೊಂಡ ಕಥೆಯನ್ನು ಸೃಷ್ಟಿಸಿದ್ದಾನೆ.

ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ವಸಾಯಿಯ ಫಾದರ್ವಾಡಿ ಪ್ರದೇಶದ ನಿವಾಸಿಯೊಬ್ಬರು ತಮ್ಮ ಮಗ ಡಿಸೆಂಬರ್ 7 ರಂದು ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ ಎಂದು ಇಲ್ಲಿನ ವಲಿವ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ

ಪೊಲೀಸರು ನಾಪತ್ತೆ ಪ್ರಕರಣದ ಕುರಿತು ಬಗ್ಗೆ ತನಿಖೆ ನಡೆಸುತ್ತಿರುವಾಗ ಡಿಸೆಂಬರ್ 8ರಂದು ಮಗನು ತನ್ನ ತಂದೆಗೆ ಕರೆ ಮಾಡುತ್ತಾನೆ. ಮೂವರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಸೆರೆಯಲ್ಲಿಟ್ಟು, 30,000 ರೂ. ನೀಡಿದರೆ ಬಿಡುಗಡೆ ಮಾಡುತ್ತಾರೆ. ಇದಲ್ಲದಿದ್ದರೆ ಕೊಲೆ ಮಾಡುತ್ತಾರೆ ಎಂದು ಮಗ ತಿಳಿಸುತ್ತಾನೆ. ಅಲ್ಲದೆ, ಮಗ ತನ್ನ ತಂದೆಗೆ QR ಕೋಡ್ ಕೂಡ ಕಳುಹಿಸುತ್ತಾನೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ, ವಸೈ, ವಿರಾರ್, ನಲ್ಲಸೋಪಾರ ಮತ್ತು

ಇತರ ಸ್ಥಳಗಳಲ್ಲಿ ಪೊಲೀಸರು ಶೋಧ ಆರಂಭಿಸಿದರು. ತನಂತರ ಈ ಯುವಕ ವಸೈ ಫಾಟಾದಲ್ಲಿ ಇರುವುದನ್ನು ಪತ್ತೆ ಮಾಡಲಾಯಿತು.

ಶನಿವಾರ ಈ ಯುವಕನನ್ನು ಪೊಲೀಸರು ವಿಚಾರಿಸಿದಾಗ, ಹಣದ ಆಸೆಗಾಗಿ ಈ ಕಥೆ ಕಟ್ಟಿದ್ದಾಗಿ ತಿಳಿದುಬಂದಿದೆ.

ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಯುವಕ ಈಗ ಬಂಧನದ ಭೀತಿ ಎದುರಿಸುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net