More

    ಛತ್ತೀಸ್​ಗಢಕ್ಕೆ ಇಬ್ಬರು ಡಿಸಿಎಂಗಳು: ಮಾಜಿ ಸಿಎಂ ಆಗಲಿದ್ದಾರೆ ಸ್ಪೀಕರ್

    ರಾಯಪುರ: ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಆಯ್ಕೆ ಮಾಡಿದ ಕೆಲವೇ ಗಂಟೆಗಳ ನಂತರ ವಿಜಯ್ ಶರ್ಮಾ ಮತ್ತು ಅರುಣ್ ಸಾವೊ ಅವರನ್ನು ಭಾನುವಾರ ಛತ್ತೀಸ್‌ಗಢದ ನೂತನ ಉಪಮುಖ್ಯಮಂತ್ರಿಗಳಾಗಿ ಹೆಸರಿಸಲಾಗಿದೆ.

    ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, 2003 ರಿಂದ 2018 ರವರೆಗೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ರಮಣ್ ಸಿಂಗ್ ಅವರು ಛತ್ತೀಸ್​ಗಢ ವಿಧಾನಸಭೆಯ ಸ್ಪೀಕರ್ ಆಗಲಿದ್ದಾರೆ.

    ರಾಜ್ಯದಲ್ಲಿ ಜಾತಿ ಸಮೀಕರಣವನ್ನು ಸಮತೋಲನಗೊಳಿಸುವ ಪ್ರಯತ್ನವಾಗಿ ಬಿಜೆಪಿಯು ಇಬ್ಬರು ಡಿಸಿಎಂ ನೇಮಕಕ್ಕೆ ಮುಂದಾಗಿದೆ. ಇತರೆ ಹಿಂದುಳಿದ ವರ್ಗಗಳ ನಾಯಕರಾಗಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೊ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ವಿಜಯ್ ಶರ್ಮಾ ಅವರು ಉಪಮುಖ್ಯಮಂತ್ರಿಗಳಾಗಲಿದ್ದಾರೆ. ಈ ಬಾರಿಯೂ ಸಿಎಂ ಹುದ್ದೆಗೆ ಆಕಾಂಕ್ಷಿಯಾಗಿದ್ದ ರಜಪೂತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ವಿಧಾನಸಭೆ ಸ್ಪೀಕರ್ ಆಗಲಿದ್ದಾರೆ.

    ಅರುಣ್ ಸಾವೊ ಕೂಡ ರಾಜ್ಯದ ಉನ್ನತ ಹುದ್ದೆಯ ರೇಸ್​ನಲ್ಲಿದ್ದರು. ಅವರನ್ನು ಡಿಸಿಎಂ ಮಾಡುವುದರಿಂದ ಗುಂಪುಗಾರಿಕೆ ತಡೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ.

    ವಿಜಯ್ ಶರ್ಮಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ವಿಜಯ್​ ಅವರು ಹೊಸ ಮುಖ್ಯಮಂತ್ರಿ ಹಾಗೂ ರಮಣ್ ಸಿಂಗ್ ಅವರಿಬ್ಬರಿಗೂ ಆತ್ಮೀಯರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಅಕ್ಬರ್ ಭಾಯ್ ಅವರನ್ನು ಅಂದಾಜು 40,000 ಮತಗಳಿಂದ ಸೋಲಿಸಿದ್ದಾರೆ.

    ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 90 ಸ್ಥಾನಗಳ ಪೈಕಿ 54 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅನ್ನು ಸೋಲಿಸಿದೆ. ಕಾಂಗ್ರೆಸ್ ಕೇವಲ 35 ಸ್ಥಾನಗಳಲ್ಲಿ ಜಯ ಗಳಿಸಿದೆ. 2018ರಲ್ಲಿ ಆ ಪಕ್ಷ ಗೆದ್ದ 68 ಸ್ಥಾನಗಳಿಗಿಂತ ಇದು ಕಡಿಮೆಯಾಗಿದೆ.

    ಲಾಭದಲ್ಲಿ ಲಾರ್ಜ್​ ಕ್ಯಾಪ್ ಮೀರಿಸಿದ ಮಿಡ್​ ಕ್ಯಾಪ್​ಗಳು: 9 ತಿಂಗಳಲ್ಲಿ ಶೇಕಡಾ 47 ಗಳಿಕೆ

    ಛತ್ತೀಸ್‌ಗಢ ಸಿಎಂ ಆಗಿ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ್ದೇಕೆ?

    ಅಮಾನವೀಯವಾಗಿ ನಾಯಿ ಮರಿ ಕೊಂದ; ಸಿಎಂ, ಸೆಂಟ್ರಲ್​ ಮಿನಿಸ್ಟರ್​ ಖಂಡಿಸಿದ್ದರಿಂದ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts