ನಾಲ್ವರು ಒತ್ತೆಯಾಳುಗಳನ್ನು ರಕ್ಷಿಸಲು 274 ಜನರ ಬಲಿ!

gaja
Published on

ಜೆರುಸಲೇಂ: ಗಾಜಾದಲ್ಲಿ ನಾಲ್ವರು ಒತ್ತೆಯಾಳುಗಳನ್ನು ರಕ್ಷಿಸುವ ಸಲುವಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 274 ಪ್ಯಾಲೆಸ್ತೇನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ.

ಸೆಂಟ್ರಲ್ ಗಾಜಾದ ಎರಡು ವಿಭಿನ್ನ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರು ಒತ್ತೆಯಾಳುಗಳನ್ನು ರಕ್ಷಿಸಿರುವುದಾಗಿ ಇಸ್ರೇಲ್ ಘೋಷಿಸಿದ್ದು ಗೊತ್ತೇ ಇದೆ. ಈ ಪ್ರಯತ್ನದಲ್ಲಿ, ಟೆಲ್ ಅವಿವ್ ಪಡೆಗಳು ನಡೆಸಿದ ದಾಳಿಗಳು ಸ್ಥಳೀಯವಾಗಿ ಭಾರಿ ಸಾವುನೋವುಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಗಾಜಾ ಆರೋಗ್ಯ ಇಲಾಖೆಯ ಪ್ರಕಾರ, ಸುಮಾರು 274 ಪ್ಯಾಲೆಸ್ತೇನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 700 ಜನರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಅಲ್-ಅಕ್ಸಾ ಆಸ್ಪತ್ರೆಯು ಸಂತ್ರಸ್ತರ ಕೂಗಿನಿಂದ ಮುಳುಗಿದೆ ಎಂದು ಚಾರಿಟಿ ಹೇಳಿದೆ.

ಒತ್ತೆಯಾಳುಗಳನ್ನು ರಕ್ಷಿಸುವ ವೇಳೆ ಪಡೆಗಳು ಭಾರಿ ದಾಳಿ ನಡೆಸಿವೆ ಎಂದು ಇಸ್ರೇಲಿ ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಒತ್ತೆಯಾಳುಗಳನ್ನು ನುಸಿರತ್‌ನಲ್ಲಿ ಎರಡು ವಿಭಿನ್ನ ಅಪಾರ್ಟ್‌ಮೆಂಟ್‌ಗಳಲ್ಲಿ ಇರಿಸಲಾಗಿತ್ತು. ಅವುಗಳ ನಡುವೆ ಸುಮಾರು 200 ಮೀಟರ್ ಅಂತರವಿದೆ. ನಮ್ಮ ಪಡೆಗಳು ಒಂದೇ ಸಮಯದಲ್ಲಿ ಎರಡೂ ಕಟ್ಟಡಗಳನ್ನು ಪ್ರವೇಶಿಸಿದವು. ಆದರೆ, ಅವರ ಮೇಲೆ ಭಾರಿ ದಾಳಿ ನಡೆಯಿತು. ರಾಕೆಟ್ ಗ್ರೆನೇಡ್‌ಗಳನ್ನು ಉಡಾಯಿಸಲಾಯಿತು. ಸುತ್ತಮುತ್ತಲಿನ ಜನರು ಮತ್ತು ಒತ್ತೆಯಾಳುಗಳನ್ನು ಉಳಿಸಲು ನಾವು ಕ್ರಮ ತೆಗೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net