ಕೋಹಿಮ(ನಾಗಾಲ್ಯಾಂಡ್): ಈಶಾನ್ಯ ರಾಜ್ಯ ನಾಗಾಲ್ಯಾಂಡ್ನಲ್ಲಿ ಸ್ವಚ್ಛತಾ ಅಭಿಯಾನ ಸದ್ದಿಲ್ಲದೆ ಸಾಗಿದೆ. ವೋಖಾ ಜಿಲ್ಲಾಡಳಿತ ಸರ್ವಜನಿಕರು ಮತ್ತು ಅಧಿಕಾರಿಗಳನ್ನೊಳಗೊಂಡಂತೆ ರಚಿಸಿರುವ ತಂಡವು ಜೂನ್ 8 ರಂದು ಡೊಯಾಂಗ್ ಜಲಾಶಯದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಪ್ರಾರಂಭಿಸಿತು.
ಇದನ್ನೂ ಓದಿ: ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯ
ವೋಖಾ ಜಿಲ್ಲಾಧಿಕಾರಿ ಅಜಿತ್ ಕುಮಾರ್ ರಂಜನ್, ಡಿಡಿಎಂಎ, ಅರಣ್ಯ, ಮೀನುಗಾರಿಕೆ, ಜಲಸಂಪನ್ಮೂಲ, ನೆಪ್ಕೊ ಮತ್ತು ಇಎಸಿ ಇಲಾಖೆಗಳ ಜೊತೆಗೆ ಜಲಾಶಯದ ಸುತ್ತಲಿನ ಗ್ರಾಮಗಳ ಜನರ ತಂಡ ರಚಿಸಿದ್ದು, ಒಂದು ದಿನದ ಕೆಲಸದ ನಂತರ, ವೋಖಾ ವೋಖಾ ಎಸ್ಪಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಸಭೆಯ ಅಧ್ಯಕ್ಷರು ಮತ್ತು ವಿವಿಧ ಗ್ರಾಮಗಳ ಪ್ರತಿನಿಧಿಗಳ ನಡುವೆ ಡೋಯಾಂಗ್‌ನಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ರಂಜನ್ ಮಾತನಾಡಿ, ಸಾಮಾಜಿಕ ಬದ್ಧತೆಯ ಪ್ರಯತ್ನವಾಗಿ ಡೊಯಾಂಗ್ ಜಲಾಶಯವನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಇದರ ಉದ್ದೇಶ ಸ್ಥಳೀಯರನ್ನು ಉತ್ತೇಜಿಸುವುದು, ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದೂ ಆಗಿದೆ ಎಂದರು.
ಅಷ್ಟೇ ಅಲ್ಲ, ಜಲಾಶಯವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಹಾಯ ಮಾಡಲು ಗ್ರಾಮಸ್ಥರನ್ನು ಒತ್ತಾಯಿಸಿದರು.
ಜಲಮೂಲಗಳ ಸಂರಕ್ಷಣೆ ದೀರ್ಘಾವಧಿಯ ಕಾರ್ಯತಂತ್ರಗಳನ್ನು ಒಳಗೊಂಡಿದೆ. ಅಲ್ಪಾವಧಿಯ ಕ್ರಮವಾಗಿ ಶುದ್ಧೀಕರಣ ಪ್ರಕ್ರಿಯೆಯು ಎರಡು ಮೂರು ದಿನಗಳವರೆಗೆ ಮುಂದುವರಿಯುತ್ತದೆ ಎಂದು ಅವರು ಮಾಹಿತಿ ನೀಡಿದರು.
ಡೊಯಾಂಗ್ ಜಲಾಶಯವನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿಹೇಳುತ್ತಾ, ಅವರು ನಾಗಾಲ್ಯಾಂಡ್‌ನ ಅಮೂಲ್ಯ ಆಸ್ತಿಗಳಲ್ಲಿ ಇದು ಒಂದಾಗಿದೆ. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಸಮುದಾಯವನ್ನು ಹೊರಬೇಕೆಂದು ಒತ್ತಾಯಿಸಿದರು.
ಸ್ವಚ್ಛತಾ ಅಭಿಯಾನದಲ್ಲಿ ಸಾಧ್ಯವಿರುವ ಯಾವುದೇ ರೀತಿಯಲ್ಲಿ ತಮ್ಮ ಬೆಂಬಲವನ್ನು ನೀಡುವುದಾಗಿ ಸ್ಥಳೀಯರು ಭರವಸೆ ನೀಡಿದರು.
ಇತ್ತೀಚೆಗೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ತಲೆದೋರಿದ್ದು, ಇಲ್ಲಿನ ಜಿಲ್ಲಾಡಳಿತಗಳು ಅನಾಹುತಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಹೆಚ್ಚು ಆದಾಯ, ಸುಶಿಕ್ಷಿತರು ಹೊಂದಿರುವ ರಾಜ್ಯ ಕರ್ನಾಟಕ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರಕ್ಕೆ ಆ ಪುಟ್ಟ ರಾಜ್ಯಗಳ ಪರಿಸರ ಸಂರಕ್ಷಣೆಯ ಕಾಳಜಿ, ಹೊಣೆ ನೋಡಿ ಜ್ಞಾನೋದಯ ಆಗಬೇಕಿದೆ.