ಉಗ್ರ ಹಫೀಜ್​ ಸಯೀದ್​ಗೆ ಮತ್ತೊಂದು ಪ್ರಕರಣದಲ್ಲಿ 15 ವರ್ಷ ಜೈಲು ಶಿಕ್ಷೆ

hafiz feb 13 2020
Published on

ಲಾಹೋರ್​: ಭಾರತಕ್ಕೆ ಅತೀ ಅಗತ್ಯ ಬೇಕಾದ ಉಗ್ರ ಹಫೀಜ್​ ಸಯೀದ್​ಗೆ ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್ ಒಂದು ಇಂದು 15 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. ಟೆರರ್​ ಫಂಡಿಂಗ್​ ಕೇಸ್​ಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್​ ಈಗಾಗಲೇ ಟೆರರ್ ಫಂಡಿಂಗ್​ನ ನಾಲ್ಕು ಕೇಸ್​ಗಳಲ್ಲಿ ಒಟ್ಟು 21 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ.

15 ವರ್ಷಗಳ ಸೆರೆವಾಸದ ಜತೆಗೆ ಹಫೀಜ್ 2 ಲಕ್ಷ ರೂಪಾಯಿ ದಂಡವನ್ನೂ ಪಾವತಿಸಬೇಕು. ಕೋರ್ಟ್ ಇಂದು ವಿಧಿಸಿದ ತೀರ್ಪು ಸೇರಿದರೆ 70 ವರ್ಷ ವಯಸ್ಸಿನ ಹಫೀಜ್ ಸಯೀದ್ ಐದು ಕೇಸ್​ಗಳಲ್ಲಿ ಒಟ್ಟು 36 ವರ್ಷ ಸೆರೆವಾಸವನ್ನು ಕೋಟ್ ಲಾಖ್​ಪತ್​ ಕಾರಾಗೃಹದಲ್ಲಿ ಅನುಭವಿಸಬೇಕಾಗುತ್ತದೆ.

ಜಮಾತ್ ಉದ್​ ದಾವಾ (ಜೆಯುಡಿ) ಸಂಸ್ಥಾಪಕ ಹಫೀಜ್​ ಸಯೀದ್​ ಮುಂಬಯಿ ಉಗ್ರ ದಾಳಿಯ ಸಂಚುಕೋರನಾಗಿದ್ದು, ಆತನನ್ನು ಹಸ್ತಾಂತರಿಸುವಂತೆ ಭಾರತ ಬೇಡಿಕೆ ಇರಿಸಿದೆ. ಜಾಗತಿಕವಾಗಿಯೂ ಆತನನ್ನು ಉಗ್ರನೆಂದು ಘೋಷಿಸಿದ್ದು, ಬಂಧನದಲ್ಲಿರಿಸುಂವತೆ ಪಾಕಿಸ್ಥಾನದ ಮೇಲೆ ಅಮೆರಿಕವೂ ಒತ್ತಡ ಹೇರಿತ್ತು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net