ಗದರ್ 2 ಕುರಿತು ಪಾಕಿಸ್ತಾನಿಗಳ ಪ್ರತಿಕ್ರಿಯೆ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

gadar2
Published on

ನವದೆಹಲಿ: ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರ ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಣ ಗಳಿಸುತ್ತಿದೆ. ಇದೀಗ ಪಾಕಿಸ್ತಾನದ ಜನರು ಗದರ್ 2 ಮತ್ತು ಸನ್ನಿ ಡಿಯೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಗದರ್ 2 ನಲ್ಲಿ ಸನ್ನಿ ಡಿಯೋಲ್ ತಾರಾ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಪಾಕಿಸ್ತಾನದಲ್ಲಿ ಜೈಲಿನಲ್ಲಿರುವ ತನ್ನ ಮಗನನ್ನು ರಕ್ಷಿಸಲು ಹೋಗುತ್ತಾರೆ. ಈ ಸಮಯದಲ್ಲಿ ತಾರಾ ಸಿಂಗ್ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಜನರನ್ನು ಸುತ್ತಿಗೆಯಿಂದ ಹೊಡೆಯುತ್ತಾರೆ. ಇದೀಗ ಪಾಕಿಸ್ತಾನದ ಜನರು ಚಿತ್ರದ ಈ ದೃಶ್ಯ ಸೇರಿದಂತೆ, ಮತ್ತೆ ಕೆಲವು ಸೀನ್​​ಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಯಾರು ಧೈರ್ಯ ಮಾಡುತ್ತಾರೆ?
ವಿಡಿಯೋದಲ್ಲಿ, ಸ್ಥಳೀಯ ವರದಿಗಾರರು ಜನರಿಗೆ ಮಾತನಾಡಿಸಿದ್ದು, ಸನ್ನಿ ಡಿಯೋಲ್ ಅವರ ಸಾಹಸ ದೃಶ್ಯಗಳ ಬಗ್ಗೆ ಅಭಿಪ್ರಾಯವನ್ನು ಕೇಳಲಾಗಿದೆ. ಸನ್ನಿ ಡಿಯೋಲ್ ಅವರ ಫೈಟ್ ಸೀನ್ ಕುರಿತು ಮಾತನಾಡಿರುವ ವ್ಯಕ್ತಿಯೊಬ್ಬರು "ಸನ್ನಿ ಡಿಯೋಲ್ ಅವರನ್ನೂ ಕೊಲ್ಲಬೇಕಿತ್ತು, ಆದರೆ ಸನ್ನಿ ಡಿಯೋಲ್ ಅವರನ್ನು ಕೊಲ್ಲಲು ಯಾರು ಧೈರ್ಯ ಮಾಡುತ್ತಾರೆ?". ಸುತ್ತಿಗೆಯ ದೃಶ್ಯಕ್ಕೆ ಪ್ರತಿಕ್ರಿಯಿಸಿದ ಇನ್ನೊಬ್ಬ ವ್ಯಕ್ತಿ, "ಯೇ ತೋ ಫಿಲ್ಮ್ ಮೇ ದಿಖಾ ರಹೇ ಹೈ, ಜರಾ ಯಹಾಂ ಆಯಾ ತೊ ಹಮ್ ಉಸ್ಕೊ ಬನತೇರಿ. ಯಹಾನ್ ಪಾಕಿಸ್ತಾನ್ ಕಾ ಬಚ್ಚಾ-ಬಚ್ಚಾ ಕಿತ್ನಾ ಬಹದ್ದೂರ್ ಹೈ" ಎಂದು ಹೇಳಿದರು.

ಸನ್ನಿ ಡಿಯೋಲ್‌ಗೆ 'ಧಾಯಿ ಕಿಲೋ ಕಾ ಹಾತ್' ಇದೆ ಎಂದು ವರದಿಗಾರ ನೆನಪಿಸಿದಾಗ, ಸನ್ನಿ ಡಿಯೋಲ್‌ ಇಲ್ಲಿಗೆ ಬಂದರೆ ನನ್ನ ಕೈ ಮಾತ್ರ ಸಾಕು.. ಈ ಸಿಕ್ಸ್ ಪ್ಯಾಕ್ ಎಬಿಎಸ್ ಎಲ್ಲಾ ಮೇಕಪ್ ಆಗಿದ್ದು, ಇಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ.. ಒಮ್ಮೆ ಅವರಿಗೆ ಕರೆ ಮಾಡಿ' ಎಂದೆಲ್ಲಾ ಮಾತನಾಡಿದ್ದಾರೆ.
ಗದರ್ 2 ಅನ್ನು ಅನಿಲ್ ಶರ್ಮಾ ನಿರ್ದೇಶಿಸಿದ್ದಾರೆ. ಅಮೀಶಾ ಪಟೇಲ್ , ಉತ್ಕರ್ಷ್ ಶರ್ಮಾ, ಮನೀಶ್ ವಾಧ್ವಾ, ಗೌರವ್ ಚೋಪ್ರಾ, ಸಿಮ್ರತ್ ಕೌರ್, ಲವ್ ಸಿನ್ಹಾ, ರೋಹಿತ್ ಚೌಧರಿ, ಮಧುಮಲ್ತಿ ಕಪೂರ್, ರಾಕೇಶ್ ಬೇಡಿ, ಮುಷ್ತಾಕ್ ಖಾನ್ ಮತ್ತು ಡಾಲಿ ಬಿಂದ್ರಾ ತಾರಾಗಣದಲ್ಲಿದ್ದಾರೆ. ಚಿತ್ರವು ಈಗ ಒಟ್ಟು 263.48 ಕೋಟಿ ಕಲೆಕ್ಷನ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net