ರನ್‌ವೇಯಲ್ಲಿ ಸ್ಕಿಡ್ ಆದ ವಿಮಾನ, ವಿಮಾನದ ಶೌಚಾಲಯದಲ್ಲಿ ಕುಸಿದು ಬಿದ್ದ ಪೈಲಟ್... ಮತ್ತೆರೆಡು ವಿಮಾನಯಾನದ ಸುದ್ದಿ ವೈರಲ್

vimana
Published on

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಹಾಟ್ ಟಾಪಿಕ್ ಆಗಿದೆ. ವಿವಿಧ ಘಟನೆಗಳೊಂದಿಗೆ ಯಾವಾಗಲೂ ವಿಮಾನಯಾನ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಮತ್ತೆರೆಡು ವಿಮಾನಗಳ ಸುದ್ದಿ ವೈರಲ್ ಆಗಿದೆ.

ರನ್‌ವೇಯಲ್ಲಿ ಸ್ಕಿಡ್ ಆಗುವ ವಿಮಾನ

ಬ್ರೆಜಿಲ್‌ನಲ್ಲಿ ವಿಮಾನವೊಂದು ರನ್‌ವೇಯಲ್ಲಿ ಸ್ಕಿಡ್ ಆಗಿ ಪ್ರಯಾಣಿಕರು ಪರದಾಡಿದರು. ಈ ಅಪಾಯಕಾರಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಫ್ಲೋರಿಯಾನೊಪೊಲಿಸ್ ಹೆರ್ಸೆಲಿಯೊ ಲುಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ LATAM ಏರ್‌ಲೈನ್ಸ್ ವಿಮಾನವು ಸ್ಕಿಡ್ ಆಗಿದೆ. ಪ್ರಯಾಣಿಕರೊಬ್ಬರು ಇದನ್ನೆಲ್ಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಮಾನ ಸ್ಕಿಡ್ ಆದ ತಕ್ಷಣ ಎಲ್ಲರೂ ಕಿರುಚಿಕೊಂಡರು. ಆ ವೇಳೆ ಜೋರಾಗಿ ಮಳೆ ಸುರಿಯುತ್ತಿತ್ತು. ಈ ಕಾರಣದಿಂದ ವಿಮಾನ ಸ್ಕಿಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಪ್ಟನ್ ಇವಾನ್ ಅಂದೂರ್ ಮೃತ್ಯು

ಭಾನುವಾರ ರಾತ್ರಿ ಪನಾಮದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ಫ್ಲೋರಿಡಾದ ಮಿಯಾಮಿಯಿಂದ ಚಿಲಿಯ ಸ್ಯಾಂಟಿಯಾಗೊ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ಭಾನುವಾರ ಸಂಜೆ 271 ಪ್ರಯಾಣಿಕರೊಂದಿಗೆ ಲ್ಯಾಥಮ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಟೇಕಾಫ್ ಆಗಿತ್ತು. ಟೇಕ್ ಆಫ್ ಆದ ಮೂರು ಗಂಟೆಗಳ ನಂತರ, ವಿಮಾನದ ಪೈಲಟ್, 56 ವರ್ಷದ ಕ್ಯಾಪ್ಟನ್ ಇವಾನ್ ಅಂದೂರ್ ಅನಾರೋಗ್ಯಕ್ಕೆ ಒಳಗಾದರು. ಪೈಲಟ್‌ಗೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ. ನಂತರ, ಕ್ಯಾಪ್ಟನ್ ಐವಾನ್ ಅಂದೂರ್ ಬಾತ್​​​ ರೂಂಗೆ ಹೋದರು. ಆದರೆ ಹೊರಗೆ ಬಂದಿಲ್ಲ. ಇಷ್ಟು ಸಮಯ ಯಾಕೆ ಬರಲಿಲ್ಲ ಎಂದು ಅನುಮಾನಿಸಿದ ಗಗನಸಖಿ ಹೋಗಿ ನೋಡಿದಾಗ ಅವರಲ್ಲಿ ಕುಸಿದು ಬಿದ್ದಿದ್ದಾರೆ.

ನಂತರ ಏರ್‌ಲೈನ್ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಹ ಪೈಲಟ್ ಸಮೀಪದ ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ವೈದ್ಯರ ತಂಡವು ಪೈಲಟ್ ಐವಾನ್ ಆಂಡೂರ್ ಅವರನ್ನು ಪರೀಕ್ಷಿಸಿತು. ಆದರೆ ಪೈಲಟ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಲ್ಯಾಥಮ್ ಏರ್‌ಲೈನ್ಸ್ ಪ್ರತಿಕ್ರಿಯಿಸಿದೆ.

"ಕ್ಯಾಪ್ಟನ್ ಇವಾನ್ ಅಂದೂರ್ ತಮ್ಮ ಏರ್‌ಲೈನ್ಸ್‌ನೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದಾರೆ. ಅವರಿಗೆ 25 ವರ್ಷಗಳ ಅನುಭವವಿದೆ'' ಎಂದು ಲ್ಯಾಥಮ್ ಏರ್‌ಲೈನ್ಸ್ ಹೇಳಿದೆ. "ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿ. ಹಲವು ವರ್ಷಗಳಿಂದ ಜೊತೆಯಲ್ಲಿ ಕೆಲಸ ಮಾಡಿದವರನ್ನು ಕಳೆದುಕೊಂಡಿರುವುದು ತುಂಬಾ ನೋವು ತಂದಿದೆ'' ಎಂದು ಏರ್ ಲೈನ್ಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net