

ಪಂಜಾಬ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಭದ್ರತಾ ಪರಿಶೀಲನೆಯಲ್ಲಿ ತೊಡಗಿದ್ದ ವೇಳೆ ಪಂಜಾಬ್-ಪಾಕಿಸ್ತಾನ ಗಡಿ ಭಾಗದಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಕ್ಯಾಮರಾ, ಭಾರತದ ಭೂಭಾಗ ಪ್ರವೇಶಿಸಿರುವುದನ್ನು ಭಾರತೀಯ ಬಿಎಸ್‌ಎಫ್ ಯೋಧರು ಪತ್ತೆ ಹಚ್ಚಿದ್ದಾರೆ.
ಮಂಗಳವಾರ ಪಂಜಾಬ್ನ ಗುರುದಾಸ್ಪುರ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್ನ ಮೇಲೆ ಬಿಎಸ್‌ಎಫ್ ಪಡೆ ಗುಂಡಿನ ದಾಳಿ ನಡೆಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆಯ ವೇಳೆ ಝೇಂಕರಿಸುವ ಶಬ್ದ ಕೇಳಿ ಬಂದಿದೆ. ಈ ವೇಳೆ ಡ್ರೋನ್ ಕ್ಯಾಮರಾ ಎಂದು ತಿಳಿದು ಬಂದಿದ್ದು, ನಂತರ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಡ್ರೋನ್ ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ. ಯಾವೆಲ್ಲಾ ಭೂಪ್ರದೇಶವನ್ನು ಚಿತ್ರೀಕರಿಸಲಾಗಿದೆ ಎನ್ನುವುದನ್ನು ಪರೀಕ್ಷಿಸಬೇಕಿದೆ. ಕ್ಯಾಮರಾ ಪತ್ತೆಯಾದ ಭಾಗದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಬಿಎಸ್ಎಫ್ನ ಡಿಐಜಿ ಪ್ರಭಾಕರ್ ಜೋಶಿ ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಪಂಜಾಬ್ ಪ್ರದೇಶದ ಭಾರತ-ಪಾಕಿಸ್ತಾನ ಗಡಿಯು ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಹಾಗೂ ಅಕ್ರಮ ವಸ್ತುಗಳನ್ನು ಸಾಗಿಸಲು ದುಷ್ಕರ್ಮಿಗಳು ಹೆಚ್ಚು ಬಳಸುವ ಮಾರ್ಗಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.