ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್​ ಸೈನಿಕರ ಉಪಟಳ; ಭಾರತೀಯ ಯೋಧರ ಪ್ರತ್ಯುತ್ತರ

LOC
Published on

ಪೂಂಚ್​: ಗಡಿ ನಿಯಂತ್ರಣಾ ರೇಖೆ ಬಳಿ ಪಾಕಿಸ್ತಾನದ ಉಪಟಳ ಹೆಚ್ಚಾಗಿದೆ. ಇಂದು ಸಂಜೆ 5.50ರಿಂದ ಒಂದೇ ಸಮ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ.

ಪೂಂಚ್​​​ನ ಶಹಪುರ, ಕಿರ್ನಿ, ಕೃಷ್ಣಾ ಘಾಟಿ ಬಳಿ ಪಾಕ್ ಸೈನಿಕರು ಸಣ್ಣ ಪ್ರಮಾಣದ ಶಸ್ತ್ರಗಳ ಮೂಲಕ ಭಾರತೀಯ ಸೇನೆಯತ್ತ ಗುಂಡು ಹಾರಿಸುತ್ತಿದ್ದಾರೆ. ಇದನ್ನೂ ಓದಿ: ಅಭ್ಯಾಸ ಆರಂಭಿಸಿದ ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್

ಕದನ ವಿರಾಮ ಉಲ್ಲಂಘಿಸಿದ ಪಾಕ್​ ಸೇನೆಯನ್ನು, ಭಾರತೀಯ ಯೋಧರೂ ಸಮರ್ಥವಾಗಿ ಎದುರಿಸುತ್ತಿದ್ದು, ಪ್ರತಿದಾಳಿ ಮಾಡುತ್ತಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಪಾಕ್​ ಸೈನಿಕರ ಉಪಟಳವಾದರೆ, ಮತ್ತೊಂದೆಡೆ ಉಗ್ರರ ಹಾವಳಿ. ಇಂದು ಕುಲಗಾಂವ್​ನಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮತ್ತೊಂದೆಡೆ ಬಡ್​ಗಾಮ್​​ ನಲ್ಲಿ ಬಿಜೆಪಿ ಮುಖಂಡನೋರ್ವನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net