ಪಾಕಿಸ್ತಾನ ಬಡತನ ಶೇ. 39.4ಕ್ಕೆ ಏರಿಕೆ!

Pakisthan
Published on

ಇಸ್ಲಾಮಾಬಾದ್​: ಕಳೆದ ಹಣಕಾಸು ವರ್ಷದಲ್ಲಿ ಪಾಕಿಸ್ತಾನದಲ್ಲಿ ಬಡತನವು ಶೇಕಡಾ 39.4ಕ್ಕೆ ಏರಿದೆ ಎಂದು ವಿಶ್ವ ಬ್ಯಾಂಕ್​ ಹೇಳಿದೆ. ಕಳಪೆ ಆರ್ಥಿಕ ಪರಿಸ್ಥಿತಿಗಳಿಂದಾಗಿ 1.25 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ಸಿಲುಕಿದ್ದಾರೆ. ಆರ್ಥಿಕ ಸ್ಥಿರತೆ ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವನ್ನು ವಿಶ್ವಬ್ಯಾಂಕ್​ ಒತ್ತಾಯಿಸಿದೆ.

ಪಾಕಿಸ್ತಾನದಲ್ಲಿ ಬಡತನವು ಒಂದು ವರ್ಷದಲ್ಲಿ 34.2 ಪ್ರತಿಶತದಿಂದ 39.4 ಪ್ರತಿಶತಕ್ಕೆ ಏರಿದೆ. ಇದರೊಂದಿಗೆ 1.25 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸುಮಾರು 95 ದಶಲಕ್ಷ ಪಾಕಿಸ್ತಾನಿಗಳು ಈಗ ಬಡತನದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್​ ಹೇಳಿದೆ.

ಆರ್ಥಿಕತೆಯ ಶೇಕಡಾ 7ಕ್ಕಿಂತ ಹೆಚ್ಚು ಹಣಕಾಸಿನ ಹೊಂದಾಣಿಕೆಯ ಮೂಲಕ ಆರ್ಥಿಕ ಸ್ಥಿರತೆ ಸಾಧಿಸುವ ಪ್ರಯತ್ನದಲ್ಲಿ ವ್ಯರ್ಥ ವೆಚ್ಚವನ್ನು ಕಡಿತಗೊಳಿಸುವಂತೆ ಪಾಕಿಸ್ತಾನವನ್ನು ಜಾಗತಿಕ ಸಾಲದಾತ ಒತ್ತಾಯಿಸಿದೆ. ಸರ್ಕಾರದ ಆದಾಯವನ್ನು ಬಲಪಡಿಸಲು ತೆರಿಗೆ ವಿನಾಯಿತಿ ಯನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ರಿಯಲ್​ ಎಸ್ಟೇಟ್​ ಮತ್ತು ಕೃಷಿ ಕ್ಷೇತ್ರಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಆದಾಯ&ಜಿಡಿಪಿ ಅನುಪಾತವನ್ನು 5 ಪ್ರತಿಶತದಷ್ಟು ಸುಧಾರಿಸುವ ಕ್ರಮಗಳನ್ನು ವಿವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net