ಪಾಕಿಸ್ತಾನದಲ್ಲಿ ಚೀನಿಯರಿಗೆ ಪ್ರಾಣ ಭಯವಂತೆ; ಕಳವಳ ವ್ಯಕ್ತಪಡಿಸಿದ ಜಿನ್​ ಪಿಂಗ್​...

pak china
Published on

ಬೀಜಿಂಗ್​: ಜಾಗತಿಕವಾಗಿ ಎಲ್ಲಾ ಜಾಗಗಳಲ್ಲೂ ಪಾಕಿಸ್ತಾನವನ್ನು ಚೀನಾ ಕಾಪಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಚಿತ್ರ ಎಂದರೆ ಪಾಕ್​ ಜನರಿಗೆ ಚೀನೀಯರು ಪಾಕಿಸ್ತಾನದಲ್ಲಿ ಮೂಗು ತೂರಿಸುವುದು ಇಷ್ಟವಿಲ್ಲ.

CPEC (ಚೀನಾ ಪಾಕಿಸ್ತಾನ ಇಕಾನಾಮಿಕ್​ ಕಾರಿಡಾರ್​) ಯೋಜನೆಯ ಮೇಲೆ 60 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿರುವ ಚೀನಾ, ತನ್ನ ಕೆಲಸಗಾರರನ್ನು ಪಾಕಿಸ್ತಾನಕ್ಕೆ ಕಳಿಸಿದೆ. ಆದರೆ ಬಲೂಚಿಸ್ತಾನದ ಜನರು ಇದನ್ನು ವಿರೋಧಿಸಿದ್ದು, 'ಬಲೂಚಿಸ್ತಾನ್​ ರಾಷ್ಟ್ರೀಯ ಸೇನೆ' ಎನ್ನುವ ಸಂಘಟನೆ ಚೀನೀಯರ ಮೇಲೆ ದಾಳಿಯನ್ನೂ ಮಾಡುತ್ತಿದೆ.

ಬುಧವಾರ ಪಾಕಿಸ್ತಾನ ಪ್ರಧಾನಿ ಶೇಬಾಝ್ ಶರೀಫ್​ ಚೀನಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಅಧ್ಯಕ್ಷ ಕ್ಸೀ ಜಿನ್​ ಪಿಂಗ್​, ಪಾಕಿಸ್ತಾನದಲ್ಲಿರುವ ಚೀನಿ ನಾಗರಿಕರ ಸುರಕ್ಷೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಶೇಬಾಝ್ ಭೇಟಿಯ ವೇಳೆ ಮಾತನಾಡಿದ ಚೀನಾ ಅಧ್ಯಕ್ಷ 'ಪಾಕಿಸ್ತಾನದಲ್ಲಿರುವ ಚೀನಾ ನಾಗರಿಕರ ಸುರಕ್ಷೆಯ ಬಗ್ಗೆ ನನಗೆ ಅಪಾರ ಕಳವಳ ಉಂಟಾಗುತ್ತಿದೆ. ಪಾಕಿಸ್ತಾನದ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ' ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net