ಕೋಸ್ಟ್​ ಗಾರ್ಡ್​ಗಳ ವಿಶೇಷ ಕಾರ್ಯಾಚರಣೆ; 6 ಜನರಿದ್ದ ಪಾಕ್ ಬೋಟ್, 480 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ

Gujarat Drugs
Published on

ಪೋರಬಂದರ್: ಮಹತ್ವದ ಕಾರ್ಯಾಚರಣೆ ಒಂದರಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್​ನ ಕರಾವಳಿ ತೀರದಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಆರು ಪಾಕಿಸ್ತಾನಿ ಪ್ರಜೆಗಳು ಹಾಗೂ ಹಡಗಿನಲ್ಲಿದ್ದ ಸುಮಾರು 480 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೋಸ್ಟ್​ ಗಾರ್ಡ್​ನ ಹಿರಿಯ ಅಧಿಕಾರಿಯೊಬ್ಬರು, ಗುಪ್ತಚರ ಇಲಾಖೆಯ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ಭಾರತೀಯ ಕೋಸ್ಟ್ ಗಾರ್ಡ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ATS) ಅಧಿಕಾರಿಗಳು ಅರಬ್ಬಿ ಸಮುದ್ರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಂತರರಾಷ್ಟ್ರೀಯ ಕಡಲ ಗಡಿ ರೇಖೆ(IMBL) ಬಳಿ ಡ್ರಗ್ಸ್ ಸಾಗಿಸುತ್ತಿದ್ದ ದೋಣಿಯನ್ನು ವಶಕ್ಕೆ ಪಡೆದಿದ್ದಾರೆ.

ಪೋರಬಂದರ್ ಕರಾವಳಿಯಿಂದ ಸುಮಾರು 480 ಕೋಟಿ ರೂಪಾಯಿ ಮೌಲ್ಯದ 180 ನಾಟಿಕಲ್ ಮೈಲು ದೂರದಲ್ಲಿ ಸುಮಾರು 60 ಪ್ಯಾಕೆಟ್ ಡ್ರಗ್ಸ್ ಸಾಗಿಸುತ್ತಿದ್ದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಡ್ರಗ್ಸ್​​ ವಿರುದ್ಧದ ಎರಡನೇ ಕಾರ್ಯಾಚರಣೆಯಾಗಿದ್ದು, ಫೆಬ್ರವರಿ 26ರಂದು ಪೋರ್​ಬಂದರ್​ ಸಮುದ್ರತಿರದಲ್ಲಿ 3,300 ಕೆಜಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಕೋಸ್ಟ್​ ಗಾರ್ಡ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net