ಬಿಎಸ್​ಪಿ ಶಾಸಕರನ್ನು ಖರೀದಿಸಿದ್ದರು ಸಿಎಂ ಗೆಹ್ಲೋಟ್​; ಪೈಲಟ್​ ಬಣದ ಸ್ಫೋಟಕ ಹೇಳಿಕೆ

Sachin Pilot and Ashok Gehlot 11 MAR 20
Published on

ಜೈಪುರ: ಬಿಜೆಪಿಯೊಂದಿಗೆ ಸಖ್ಯ ಬಳಸಿ ಸ್ವತ: ಸಚಿನ್​ ಪೈಲಟ್​ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​ ನೇರವಾಗಿ ಆರೋಪಿಸಿರುವುದು ಪೈಲಟ್​ ಬಣದ ಶಾಸಕರನ್ನು ಕೆರಳಿಸಿದೆ.

ನಮಗೆ ಖುದ್ದು ಅಶೋಕ್​ ಗೆಹ್ಲೋಟ್​ ಹಣ ನೀಡಿದ್ದರು ಎಂದು ಬಹುಜನ ಸಮಾವಾದಿ ಪಕ್ಷದಿಂದ (ಬಿಎಸ್​ಪಿ) ಕಾಂಗ್ರೆಸ್​ಗೆ ಬಂದಿರುವ ಶಾಸಕರು ಹೇಳಿದ್ದಾರೆ. ಎರಡು ಬಾರಿಯೂ ಬಿಎಸ್​ಪಿ ಶಾಸಕರು ಅಶೋಕ್​ ಗೆಹ್ಲೋಟ್​ಗಾಗಿಯೇ ಕಾಂಗ್ರೆಸ್​ ಸೇರಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಎಸ್​ಪಿಯಿಂದ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಶಾಸಕ ಹಾಗೂ ಮಾಜಿ ಸಚಿವ ರಮೇಶ್​ ಮೀನಾ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಅಶೋಕ್​ ಗೆಹ್ಲೋಟ್​ ಮೊದಲ ಅವಧಿಯಲ್ಲಿ ಬಿಎಸ್​ಪಿಯ ನಾಲ್ವರು ಶಾಸಕರನ್ನು ಗೆಹ್ಲೋಟ್​ ಖರೀದಿಸಿದ್ದರು. ಇನ್ನು ಎರಡನೇ ಅವಧಿಯಲ್ಲಿ ಆರು ಬಿಎಸ್​ಪಿ ಶಾಸಕರನ್ನು ಕಾಂಗ್ರೆಸ್​ ಜತೆಗೆ ವಿಲೀನಗೊಳಿಸಿದ್ದರು ಎಂದು ರಮೇಶ್​ ಮೀನಾ ಹೇಳಿದ್ದಾರೆ.

ಇನ್ನೊಬ್ಬ ಬಿಎಸ್​ಪಿ ಶಾಸಕ ಕೂಡ ಇದೇ ಪ್ರಶ್ನೆ ಕೇಳಿದ್ದಾನೆ. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವುದರಿಂದ ಬೇಸರವಾಗಿದೆ. ಬಿಎಸ್​ಪಿಯಿಮದ ನಾವು ಕಾಂಗ್ರೆಸ್​ಗೆ ಬಂದಾಗ ನಮಗೆಷ್ಟು ಹಣ ಕೊಡಲಾಗಿತ್ತು ಎಂಬುದನ್ನೇ ಗೆಹ್ಲೋಟ್​ ಬಹಿರಂಗ ಪಡಿಸಲಿ ಎಂದು ದೌಸಾ ಶಾಸಕ ಮುರಾರಿಲಾಲ್​ ಮೀನಾ ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net