ಪಾಕ್​ನಿಂದಲೇ ಪಹಲ್ಗಾಮ್‌ ದಾಳಿ, ನಮ್ಮ ಬಳಿ ಸಾಕ್ಷಿ ಇದೆ: ಚಿದಂಬರಂಗೆ ತಿರುಗೇಟು ಕೊಟ್ಟ ಅಮಿತ್​ ಷಾ! Pahalgam attack

Amit Shah (3)
Published on

Pahalgam attack: ಶ್ರೀನಗರದಲ್ಲಿ ಸೋಮವಾರ ( ಜುಲೈ28 ) ನಡೆದ ಆಪರೇಷನ್ ಮಹಾದೇವ್‌ನಲ್ಲಿ ಹತ್ಯೆಗೀಡಾಗಿರುವ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಡೆಸಿದ್ದು ಇದೇ ವ್ಯಕ್ತಿಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ (ಜುಲೈ 29) ಲೋಕಸಭೆಯಲ್ಲಿ ತಿಳಿಸಿದರು.

ಪಹಲ್ಗಾಮ್‌ ದಾಳಿಯಲ್ಲಿ ನಮ್ಮ ದೇಶದವರೂ ಭಾಗಿಯಾಗಿರಬಹುದು ಮತ್ತು ಪಾಕಿಸ್ತಾನಿ ಸಂಪರ್ಕದ ಪುರಾವೆಗಳನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿಕೆಗೆ ಇಂದು ತಿರುಗೇಟು ನೀಡಿದ ಅಮಿತ್​ ಷಾ, ಕಾಂಗ್ರೆಸ್ ನಾಯಕ ಚಿದಂಬರಂ ಅವರು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಇಬ್ಬರು ಭಯೋತ್ಪಾದಕರು ಪಾಕಿಸ್ತಾನದ ಮತದಾರರ ಗುರುತಿನ ಸಂಖ್ಯೆಗಳನ್ನು ಹೊಂದಿದ್ದಾರೆ ಎನ್ನುವುದು ದೃಢವಾಗಿದೆ. ಅವರಿಂದ ವಶಪಡಿಸಿಕೊಂಡಿರುವ ಚಾಕೊಲೇಟ್‌ಗಳು ಸಹ ಪಾಕಿಸ್ತಾನದಲ್ಲಿ ತಯಾರಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಇದರಲ್ಲಿ ನಿಮಗೆ ಇನ್ನೇನು ಪುರಾವೆ ಬೇಕು? ಎಂದು ಅಮಿತ್ ಷಾ ಮರು ಪ್ರಶ್ನಿಸಿದರು.

ಮುಂದುವರೆದು ಮಾತನಾಡುತ್ತಾ, ನಿನ್ನೆ ಮಾಜಿ ಗೃಹ ಸಚಿವ ಚಿದಂಬರಂ ಅವರು ಪಾಕಿಸ್ತಾನದಿಂದ ಭಯೋತ್ಪಾದಕರು ಬಂದಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಕೇಳಿದ್ದಾರೆ. ಈ ರೀತಿಯಾಗಿ ಹೇಳಿಕೆ ನೀಡಿ ಅವರು ಯಾರನ್ನು ಉಳಿಸಲು ಬಯಸುತ್ತಿದ್ದಾರೆ? ಪಾಕಿಸ್ತಾನವನ್ನು ರಕ್ಷಿಸುವುದರಿಂದ ಅವರಿಗೆ ಏನು ಸಿಗುತ್ತದೆ? ಮೃತಪಟ್ಟಿರುವ ಮೂವರು ಪಾಕಿಸ್ತಾನಿ ಪ್ರಜೆಗಳೇ ಎಂಬುದಕ್ಕೆ ನಮ್ಮ ಬಳಿ ಅನೇಕ ಪುರಾವೆಗಳಿವೆ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net