ಬಾಲಯ್ಯ, ಅಜಿತ್​, ಅರಿಜಿತ್ ಸಿಂಗ್.. ರಾಷ್ಟ್ರಪತಿಯಿಂದ ಪದ್ಮ, ಪದ್ಮಭೂಷಣ ಪ್ರಶಸ್ತಿ ಪಡೆದ​ ಕಲಾವಿದರ ಪಟ್ಟಿ ಇಲ್ಲಿದೆ ನೋಡಿ | Padma Awards

ವಿಜಯವಾಣಿ (97)
Published on

Padma Awards: ಈ ವರ್ಷದ ಜನವರಿ 25ರಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ ಕೇಂದ್ರ ಸರ್ಕಾರ, ಇಂದು (ಏ.28) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ. ಏಳು ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಈ ವಿಶೇಷ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರದಾನ ಮಾಡಿದೆ.

ಟಾಲಿವುಡ್​ ಹಿರಿಯ ನಟರಾದ ಬಾಲಕೃಷ್ಣ (ನಂದಮೂರಿ ಬಾಲಕೃಷ್ಣ) ಮತ್ತು ತಮಿಳು ನಟ ಅಜಿತ್, ಬಾಲಿವುಡ್​ ಗಾಯಕ ಅರಿಜಿತ್ ಸಿಂಗ್​ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಪದ್ಮಭೂಷಣ (ಪದ್ಮಭೂಷಣ 2025) ಪ್ರಶಸ್ತಿಗಳನ್ನು ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತರ ಕ್ಷೇತ್ರಗಳ ವಿವಿಧ ಗಣ್ಯ ವ್ಯಕ್ತಿಗಳಿಗೂ ಪ್ರಶಸ್ತಿ ಹಸ್ತಾಂತರಿಸಿ ಸನ್ಮಾನಿಸಲಾಯಿತು.

ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಕಲಾವಿದರ ಪಟ್ಟಿ

  • ನಟ ಅಜಿತ್ ಕುಮಾರ್- ಪದ್ಮಭೂಷಣ
  • ನಟ ನಂದಮೂರಿ ಬಾಲಕೃಷ್ಣ- ಪದ್ಮಭೂಷಣ
  • ಗಾಯಕ ಪಂಕಜ್ ಉದಾಸ್ (ಮರಣೋತ್ತರ)- ಪದ್ಮಭೂಷಣ
  • ನಿರ್ಮಾಪಕ ಶೇಖರ್ ಕಪೂರ್- ಪದ್ಮಭೂಷಣ
  • ನಟ ಅಶೋಕ್ ಲಕ್ಷ್ಮಣ್ ಸರಾಫ್- ಪದ್ಮಶ್ರೀ
  • ನಟನಾ ತರಬೇತುದಾರ, ರಂಗಭೂಮಿ ನಿರ್ದೇಶಕ ಬ್ಯಾರಿ ಗಾಡ್‌ಫ್ರೇ ಜಾನ್- ಪದ್ಮಶ್ರೀ
  • ಗಾಯಕ ಜಸ್ಪಿಂದರ್ ನರುಲಾ - ಪದ್ಮಶ್ರೀ
  • ಗಾಯಕಿ ಅಶ್ವಿನಿ ಭಿಡೆ ದೇಶಪಾಂಡೆ - ಪದ್ಮಶ್ರೀ
  • ಸಂಗೀತ ಸಂಯೋಜಕ ರಿಕಿ ಜ್ಞಾನ್ ಕೇಜ್ - ಪದ್ಮಶ್ರೀ
  • ಜಾನಪದ ಗಾಯಕ ಭೇರು ಸಿಂಗ್ ಚೌಹಾಣ್ - ಪದ್ಮಶ್ರೀ
  • ಭಕ್ತಿ ಗಾಯಕ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ - ಪದ್ಮಶ್ರೀ
  • ಜಾನಪದ ಸಂಗೀತಗಾರ ಜೋಯ್ನಾಚರಣ್ ಬಠಾರಿ - ಪದ್ಮಶ್ರೀ
  • ಶಾಸ್ತ್ರೀಯ ಗಾಯಕಿ ಕೆ. ಓಮನಕುಟ್ಟಿ ಅಮ್ಮ - ಪದ್ಮಶ್ರೀ
  • ಗಾಯಕ ಮಹಾಬೀರ್ ನಾಯಕ್ - ಪದ್ಮಶ್ರೀ
  • ನಟಿ ಮಮತಾ ಶಂಕರ್ - ಪದ್ಮಶ್ರೀ
  • ನಟ ಅನಂತ್ ನಾಗ್ - ಪದ್ಮಭೂಷಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net