ರಷ್ಯಾ-ಉಕ್ರೇನ್​ ಯುದ್ಧ; 3 ದಿನಗಳ ಕದನ ವಿರಾಮ ಘೋಷಿಸಿದ ಪುಟಿನ್| russia ukraine war

war
Published on

Putin| ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆದ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವು ತಲುಪಲು ಸಾಧ್ಯವೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ನಿರ್ಧರಿಸುತ್ತಿದ್ದಂತೆ, ಎರಡನೇ ಮಹಾಯುದ್ಧದ ವಿಜಯ ದಿನವನ್ನು ಗುರುತಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇ 8 ರಿಂದ 10 ರವರೆಗೆ ಉಕ್ರೇನ್‌ನಲ್ಲಿ ಮೂರು ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ.

ಈ ಕದನ ವಿರಾಮವು ಮೇ 8 ರಂದು ಪ್ರಾರಂಭವಾಗಿ ಮೇ 10 ರ ಅಂತ್ಯದವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಎರಡನೇ ವಿಶ್ವ ಯುದ್ಧದ ಅಂತ್ಯದ ದಿನವಾದ ಮೇ 9ರಂದು ರಷ್ಯಾ ವಿಜಯ ದಿನ ಆಚರಿಸುವ ಕಾರಣ ಈ ಕದನ ವಿರಾಮ ಘೋಷಿಸಲಾಗಿದೆ. ನಾಜಿ ಜರ್ಮನಿಯ ಸೋಲನ್ನು ಆಚರಿಸುವ ಮೇ 9 ರ ದಿನವನ್ನು ಗುರುತಿಸಲು ಮಾನವೀಯ ಆಧಾರದ ಮೇಲೆ ಪುಟಿನ್ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.

ಉಕ್ರೇನಿಯನ್ ಕಡೆಯಿಂದ ಒಪ್ಪಂದ ಉಲ್ಲಂಘನೆಯ ಸಂದರ್ಭ ಎದುರಾದರೆ, ರಷ್ಯಾದ ಸಶಸ್ತ್ರ ಪಡೆಗಳು ಸಮರ್ಪಕ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ಕ್ರೆಮ್ಲಿನ್ ಪ್ರಕಟಿಸಿದೆ.

ಉಕ್ರೇನ್​ನ ಜನರ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದ ನಡೆಯಿಂದ ಬೇಸರವಾಗಿದೆ ಎಂದು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ರಷ್ಯಾದೊಂದಿಗಿನ ಶಾಂತಿ ಒಪ್ಪಂದಕ್ಕಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ ಅವರು ದಕ್ಷಿಣ ಉಕೇನ್​ನ ಕೈಮಿಯಾವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಇನ್ನೊಂದೆಡೆ, ತಮ್ಮ ಪಡೆಗಳು ಉಕ್ರೇನ್ ವಿರುದ್ಧದ ಯುದ್ದಕ್ಕಾಗಿ ರಷ್ಯಾಗೆ ಬೆಂಬಲ ನೀಡುತ್ತಿದೆ ಎಂದು ಉತ್ತರ ಕೊರಿಯಾ ಖಚಿತಪಡಿಸಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net