ಆರ್​ಸಿಬಿ ಅಗ್ರ, ಸಿಎಸ್​ಕೆ ಕಡೆ ಸ್ಥಾನ! ಯಾರಿಗೆ ಪ್ಲೇಆಫ್​ ಭಾಗ್ಯ? ಹೀಗಿದೆ 10 ಬಲಿಷ್ಠ ತಂಡಗಳ ಮುಂದಿನ ಲೆಕ್ಕಾಚಾರ | IPL 2025

ವಿಜಯವಾಣಿ (94)
Published on

IPL 2025: ಐಪಿಎಲ್​ 18ನೇ ಆವೃತ್ತಿಯ ದ್ವಿತೀಯಾರ್ಧ ಇನ್ನೇನು ಕೆಲವೇ ವಾರಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದೆ. ಈಗಾಗಲೇ 10 ಪಂದ್ಯಗಳನ್ನು ಆಡಿರುವ ಕೆಲವು ತಂಡಗಳು ಐಪಿಎಲ್​ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಪ್ಲೇಆಫ್​ ಹೋಗಲು ಸಾಧ್ಯವೇ ಅಥವಾ ಇಲ್ಲವೇ? ಎಂಬ ಸುಳಿವನ್ನು ಈಗಾಗಲೇ ಕ್ರಿಕೆಟ್​ ಅಭಿಮಾನಿಗಳ ಮುಂದಿಟ್ಟಿದೆ. ಪ್ರಸ್ತುತ ಅದ್ಭುತ ಆಲ್​ರೌಂಡ್​ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನಕ್ಕೇರಿದರೆ, ಅತ್ಯಂತ ಕಳಪೆ ಪ್ರದರ್ಶನ ಮೂಲಕ ಸಿಎಸ್​ಕೆ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

10 ಪಂದ್ಯಗಳನ್ನಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 7 ಪಂದ್ಯ ಗೆದ್ದು ಮೂರರಲ್ಲಿ ಸೋಲು ಕಂಡಿದೆ. ಒಟ್ಟು 14 ಪಾಯಿಂಟ್​ನಿಂದ ಅಗ್ರಸ್ಥಾನದಲ್ಲಿ ಮಿಂಚುತ್ತಿರುವ ಆರ್​ಸಿಬಿ, ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದ ಎದುರಾಳಿಗೆ ಗೆಲುವಿನ ಸವಾಲು ಹಾಕುತ್ತಿದೆ. ಮತ್ತೊಂದೆಡೆ, ಐಪಿಎಲ್​ ಇತಿಹಾಸದಲ್ಲೇ ಐದು ಬಾರಿ ಚಾಂಪಿಯನ್ಸ್​ ಆಗಿ ಮೆರೆದಿರುವ ಚೆನ್ನೈ ಪಡೆ, ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಹೀನಾಯ ಹಾಗೂ ಸೋಲಿಗೆ ಗುರಿಯಾಗಿದೆ. ಇದು ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಕ್ರಿಕೆಟ್​ ಪ್ರಿಯರನ್ನು ಅಚ್ಚರಿಗೆ ದೂಡಿದೆ. ಅಸಲಿಗೆ ಉಳಿದಿರುವ ಕೆಲವೇ ದಿನಗಳಲ್ಲಿ ಯಾವ ನಾಲ್ಕು ತಂಡಗಳು ತಮ್ಮ ಪ್ಲೇಆಫ್​ ಕನಸ್ಸನ್ನು ಈಡೇರಿಸಿಕೊಳ್ಳಲಿದೆ ಎಂಬುದು ಸ್ಪಷ್ಟವಾಗಲಿದೆ.

10 ಬಲಿಷ್ಠ ತಂಡಗಳ ಪ್ಲೇಆಫ್ ಲೆಕ್ಕಾಚಾರ

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

ನಿನ್ನೆ (ಏ.27) ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಆರ್‌ಸಿಬಿ 10 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ, ಎರಡು ಗೆಲುವು ದಾಖಲಿಸಿದರೆ, ಆರ್​ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಮೂರು ಅಥವಾ ನಾಲ್ಕು ಗೆಲುವುಗಳು ಸಿಕ್ಕರೆ ಟಾಪ್​ ಎರಡು ಸ್ಥಾನಗಳಲ್ಲಿ ಒಂದಂತು ಖಚಿತ.

2. ಗುಜರಾತ್ ಟೈಟಾನ್ಸ್

8 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪ್ಲೇಆಫ್ ಕನಸು ಹೊತ್ತಿರುವ ಜಿಟಿ, ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕು. ಒಟ್ಟಾರೆ ನಾಲ್ಕು ಪಂದ್ಯಗಳನ್ನು ಗೆದ್ದರೆ, ಪ್ಲೇಆಫ್‌ ಪ್ರವೇಶ ಖಚಿತವಾಗಲಿದೆ.

ಸೋಲಿನಿಂದಲೇ ಆರಂಭಿಸಿದ ಎಂಐ, ಬ್ಯಾಕ್ ಟು ಬ್ಯಾಕ್​ ಐದು ಪಂದ್ಯಗಳನ್ನು ಗೆದ್ದಿದ್ದಾರೆ. 10 ಪಂದ್ಯಗಳನ್ನಾಡಿರುವ ಮುಂಬೈ, 12 ಅಂಕಗಳನ್ನು ಗಳಿಸಿ, ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂದಿನ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಮುಂಬೈ ಗೆದ್ದರೆ, ಪ್ಲೇಆಫ್ ಕನಸು ನನಸಾಗಲಿದೆ. ಅಕಸ್ಮಾತ್​ ಎರಡು ಗೆಲುವು ದಾಖಲಿಸಿದರೆ ಪ್ಲೇಆಫ್​ ಹೋಗುವ ಸಾಧ್ಯತೆಗಳಿವೆ.

4. ಡೆಲ್ಲಿ ಕ್ಯಾಪಿಟಲ್ಸ್

ಪ್ರಸ್ತುತ ಆವೃತ್ತಿಯಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​, ಆಡಿರುವ 9 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ 5 ಮ್ಯಾಚ್​ಗಳಲ್ಲಿ ನಾಲ್ಕು ಗೆಲುವು ಡಿಸಿಗೆ ಅಗತ್ಯ. ಈ ಪೈಕಿ ಮೂರು ಪಂದ್ಯಗಳನ್ನು ಗೆದ್ದರೆ, ಅವರ ಪ್ಲೇಆಫ್ ಪ್ರವೇಶ ಬಹುತೇಕ ಖಚಿತ.

ಒಂಬತ್ತು ಪಂದ್ಯಗಳ ನಂತರ ಐದು ಪಂದ್ಯ ಗೆದ್ದು, ಮೂರರಲ್ಲಿ ಸೋತು ಮತ್ತು ಒಂದರಲ್ಲಿ ಫಲಿತಾಂಶ ಹೊರಬೀಳದ ಹಿನ್ನೆಲೆ ಪಂಜಾಬ್ ಐದನೇ ಸ್ಥಾನವನ್ನು ಅಲಂಕರಿಸಿದೆ. ಪಂಜಾಬ್​ ಪ್ಲೇಆಫ್ ಆಸೆ ಈಡೇರಬೇಕು ಎಂದಾದರೆ ಮುಂದಿನ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಇದರಲ್ಲಿ ಮೂರು ಗೆದ್ದರೆ, ಅರ್ಹತೆ ಪಡೆಯುವ ಸಾದ್ಯತೆಗಳು ಹೆಚ್ಚಿವೆ.

6. ಲಖನೌ ಸೂಪರ್ ಜೈಂಟ್ಸ್

ಪ್ರಸ್ತುತ 10 ಪಂದ್ಯಗಳ ಬಳಿಕ 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿರುವ ಎಲ್​ಎಸ್​ಜಿ, ಪ್ಲೇಆಫ್‌ ಓಟದಲ್ಲಿ ಜೀವಂತವಾಗಿರಲು ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ.

7. ಕೋಲ್ಕತ್ತಾ ನೈಟ್ ರೈಡರ್ಸ್

ಹಾಲಿ ಚಾಂಪಿಯನ್ಸ್​ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಮೂರು ಗೆಲುವಿನ ಮೂಲಕ ಪ್ರಸ್ತುತ ಆವೃತ್ತಿಯಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ಲೇಆಫ್ ಕದನದಿಂದ ಕೊಂಚ ದೂರ ಉಳಿದಿರುವ ಕೆಕೆಆರ್, ಮುಂದಿನ ಐದು ಪಂದ್ಯಗಳಲ್ಲಿ ಐದೂ ಗೆದ್ದರೆ ಮಾತ್ರ ಪ್ಲೇಆಫ್ ಕನಸು ಜೀವಂತವಾಗಿ ಉಳಿಯುತ್ತದೆ.

ಕೆಕೆಆರ್‌ನಂತೆಯೇ, ಎಸ್​ಆರ್​ಎಚ್​ ಕೂಡ ಒಂಬತ್ತು ಪಂದ್ಯಗಳ ಬಳಿಕ ಕೇವಲ ಮೂರು ಗೆಲುವಿನೊಂದಿಗೆ 8ನೇ ಸ್ಥಾನವನ್ನು ಅಲಂಕರಿಸಿದೆ. ಪ್ಲೇಆಫ್​ಗೆ ಪ್ರವೇಶ ಪಡೆಯಲು ಉಳಿದಿರುವ ಐದು ಪಂದ್ಯಗಳನ್ನು ಸನ್​ರೈಸರ್ಸ್​ ಗೆಲ್ಲುವುದು ಅನಿವಾರ್ಯ.

9. ರಾಜಸ್ಥಾನ ರಾಯಲ್ಸ್

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತಿರುವ ಆರ್​ಆರ್, ಸದ್ಯ ಪ್ಲೇಆಫ್​ ರೇಸ್​ನಿಂದ ದೂರ ಉಳಿದಿದೆ. ಆದಾಗ್ಯೂ, ಉಳಿದಿರುವ ಐದು ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲುವುದರ ಜತೆಗೆ ಇತರ ತಂಡಗಳ ಫಲಿತಾಂಶಗಳಿಗಾಗಿ ಮೇಲೆ ಅವಲಂಬಿತವಾಗಬೇಕು.

ಇನ್ನೂ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್​, ಆಡಿರುವ 9 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯ ಗೆದ್ದು ಉಳಿದೆಲ್ಲ ಪಂದ್ಯಗಳನ್ನು ಹೀನಾಯವಾಗಿ ಸೋತಿದೆ. ಪ್ರಸ್ತುತ ಸಿಎಸ್​ಕೆಗೆ ಪ್ಲೇಆಫ್ ಹಾದಿ ಭಾರೀ ಕಷ್ಟಕರವಾಗಿದ್ದು, ಪ್ಲೇಆಫ್​ ಕನಸು ಭಗ್ನಗೊಂಡಿದೆ. ಆದರೂ ಮುಂದಿನ 5 ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುವುದು ಮಾತ್ರವಲ್ಲದೇ ಇತರೆ ತಂಡಗಳ ಸೋಲಿನ ಮೇಲೆ ಕಾಯಬೇಕಿದೆ. ಇಷ್ಟಾದರೂ ಅವಕಾಶ ಬಹುತೇಕ ಅನುಮಾನ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net