ಕಾಡಾನೆಗಳ ದಾಳಿಗೆ ಭತ್ತದ ಬೆಳೆ ನಾಶ

IMG-20231212-WA0146
Published on

ಹನಗೋಡು: ಹುಣಸೂರು ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಉಡುವೇಪುರ ಗ್ರಾಮಕ್ಕೆ ಸೋಮವಾರ ರಾತ್ರಿ ಮೂರು ಕಾಡಾನೆಗಳು ಮೇವು ಅರಸಿಕೊಂಡು ಬಂದು ಬೆಳೆಗಳನ್ನು ತಿಂದು ನಾಶ ಮಾಡಿವೆ.


ಗ್ರಾಮದ ಕೊಂಬಾಲೆ ಸತೀಶ ಅವರು ಬೆಳೆದಿರುವ ಭತ್ತ ಹಾಗೂ ರಾಗಿ ಬೆಳೆಗಳನ್ನು ತಿಂದು ತುಳಿದು ನಾಶ ಮಾಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಕಾಟವಿರಲಿಲ್ಲ. ಎರಡು-ಮೂರು ವಾರಗಳಿಂದ ಅಯ್ಯನಕೆರೆ ಹಾಗೂ ಗಾಡಗಯ್ಯನಕಡ ಭಾಗದಿಂದ ಅರಣ್ಯ ದಾಟಿ ಬಂದು ರೈತರ ಬೆಳೆ ನಾಶಪಡಿಸುತ್ತಿವೆ. ಕೂಡಲೇ ಆರಣ್ಯ ಇಲಾಖೆ ಸಿಬ್ಬಂದಿ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net