ಕಸಾಪ ದತ್ತಿ ಪ್ರಶಸ್ತಿಗೆ ಶಾ.ಮಂ.ಕೃಷ್ಣರಾಯ ಆಯ್ಕೆ

Kasapa - S. m. krishanaraya
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ. ಶ್ರೀನಿವಾಸ ಸ್ಮರಣಾರ್ಥ ನೀಡುವ ಪ್ರಸಕ್ತ ಸಾಲಿನ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿಗೆ ಬರಹಗಾರರಾದ ಶಾ.ಮಂ. ಕೃಷ್ಣರಾಯ ಅವರು ಆಯ್ಕೆಯಾಗಿದ್ದಾರೆ.

ಡಾ. ವರದಾ ಶ್ರೀನಿವಾಸ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರಿಸಿರುವ ಈ ದತ್ತಿ ಪ್ರಶಸ್ತಿಯನ್ನು 2017ರಿಂದಲೂ ಬರಹಗಾರರಿಗೆ ಈ ಪ್ರಶಸ್ತಿಯನ್ನು ನಿರಂತರವಾಗಿ ನೀಡುತ್ತಾ ಬರಲಾಗುತ್ತಿದೆ.

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯು ಒಮ್ಮತದಿಂದ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net