ಗ್ರಾಮೀಣ ಜನರಿಗೆ ನಮ್ಮ ಕ್ಲಿನಿಕ್ ಸಹಕಾರಿ

avt namma clinic
ಆನವಟ್ಟಿಯಲ್ಲಿ ನಮ್ಮ ಕ್ಲಿನಿಕ್ ಅನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಡಾ. ವಿನಯ್ ಪಾಟೀಲ್, ನೂತನ್ ನಾಯ್ಕ, ಸುರೇಶ್ ಹಾವಣ್ಣನವರ್, ಸುಪ್ರಿಯಾ ಇತರರಿದ್ದರು.
Published on

ಆನವಟ್ಟಿ (ಸೊರಬ): ಆರೋಗ್ಯ ಕೇಂದ್ರಗಳಲ್ಲಿನ ಒತ್ತಡ ನಿವಾರಿಸಲು, ಜನಸಾಮಾನ್ಯರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್ ಪಾಟೀಲ್ ಹೇಳಿದರು.

ಆನವಟ್ಟಿಯಲ್ಲಿ ಬುಧವಾರ ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜನರ ಕ್ಷೇಮಾಭಿವೃದ್ಧಿಗೆ ರಾಜ್ಯದಲ್ಲಿ 563 ನಮ್ಮ ಕ್ಲಿನಿಕ್ ಮಂಜೂರಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 3 ಕ್ಲಿನಿಕ್ ಆರಂಭಗೊಂಡಿವೆ. ಪ್ರತಿ ತಿಂಗಳು ಕ್ಲಿನಿಕ್‌ಗೆ ತಜ್ಞ ವೈದ್ಯರು ಭೇಟಿ ನೀಡುವರು. ಪ್ರತಿ ನಿತ್ಯ ವ್ಯೆದ್ಯಾಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಕರೊನಾ ಸಂದರ್ಭ ವೈದ್ಯಕೀಯ ವ್ಯವಸ್ಥೆ ಮೇಲಿನ ಒತ್ತಡ ಗಮನಿಸಿ ನಮ್ಮ ಕ್ಲಿನಿಕ್ ಆರಂಭಗೊಂಡಿದ್ದು, ಗ್ರಾಮೀಣ ಪ್ರದೇಶದ ಜನತೆಗೆ ಪ್ರಯೋಜನವಾಗಲಿದೆ ಎಂದರು.
ಮುಖಂಡ ಮಧುಕೇಶ್ವರ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ದೊರಕಿಸುವಲ್ಲಿ ಸಹಕಾರಿಯಾಗಲಿದೆ. ಗಡಿ ಜಿಲ್ಲೆಗಳ ಜನತೆಗೆ ಕಾರ್ಯಕ್ರಮ ಅತ್ಯಂತ ಉಪಯುಕ್ತ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಗ್ರಾಪಂ ಮಾಜಿ ಅಧ್ಯಕ್ಷ ರವಿಕಿರಣ, ಸದಸ್ಯರಾದ ವಿಜಯಮ್ಮ, ದಾಕ್ಷಾಯಿಣಿ, ಸರೋಜಮ್ಮ, ಪ್ರವೀಣ, ಕಲಂದರ ಸಾಬ್, ಪಪಂ ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ವೈದ್ಯರಾದ ನೂತನ್ ನಾಯ್ಕ, ಹರ್ಷಾ ಪಾಟೀಲ್, ಸುಪ್ರಿಯಾ, ಮಾನೆ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net