ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಸಮನ್ವಯ ಸಮಿತಿ ರಚನೆ…

nomads
Published on

ಬೆಂಗಳೂರು: OBC, SC ಹಗೂ ST ಅಲೆಮಾರಿ ಸಮುದಾಯಗಳ ಸಂಘಟನೆಗಳು ಒಟ್ಟಾಗಿ ಕರ್ನಾಟಕ ಅಲೆಮಾರಿ, ಅರೆ-ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಸಮನ್ವಯ ಸಮಿತಿಯನ್ನು ರಚಿಸಿವೆ. ಈ ಕಾರ್ಯಕ್ರಮ ಜುಲೈ 13ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದೆ.

ಈ ಸಭೆಯಲ್ಲಿ ಪ್ರೊಫೆಸರ್ ಶ್ರೀ ಎಸ್ ಜಿ ಸಿದ್ಧರಾಮಯ್ಯ ಸರ್, ಶ್ರೀ ಇಂಧುಧರ್ ಹೊನ್ನಾಪುರ , ಶ್ರೀ ಎಂ ಎಸ್ ಹೆಳವರ್ , ಶ್ರೀ ಕೆ ಎಂ ಮೈತ್ರಿ ಮತ್ತು ಇತರ ಹಿರಿಯ ನಾಯಕರು ಉಪಸ್ಥತರಿದ್ದರು. ಈ ಸಂಘಕ್ಕೆ ಶೇಷಪ್ಪರನ್ನು ಪ್ರಧಾನ ಸಂಚಾಲಕರಾಗಿ ಆಯ್ಕೆ ಮಾಡಲಾಗಿದ್ದು ಒಟ್ಟು 28 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ಪ್ರೊ. ಎಸ್.ಜಿ. ಸಿದ್ದರಾಮಯ್ಯ “ಅಲೆಮಾರಿ ಸಮುದಾಯದವರು ರಾಜಕೀಯ ಆಧಿಕಾರವನ್ನು ಪಡೆಯುವುದು ಅವಶ್ಯವಿದ್ದು ಸಮನ್ವಯ ಸಮಿತಿ ಮೂಲಕ ಅದನ್ನು ಪಡೆಯಬಹುದು. ಸ್ವಾವಲಂಬಿಗಳಾಗಿ ನಿಮ್ಮ ಹಕ್ಕುಗಳಿಗೆ ನೀವೇ ಹೋರಾಟ ರೂಪಿಸಿಕೊಂಡು ಹೋರಾಟ ನೆಡೆಸಿದಲ್ಲಿ ನ್ಯಾಯ ಸಿಗುವುದು ನಿಶ್ಚಿತ“ಎಂದರು.

ವಕೀಲರಾದ ವೀರೇಶ “ಅಲೆಮಾರಿ ಸಮುದಾಯಗಳಲ್ಲಿ ಇರುವ ಯುವಕರನ್ನು ಹೋರಾಟಗಾರರನ್ನು ನಾಯಕರನ್ನಾಗಿ ಬೆಳೆಸುವ ಅವಶ್ಯಕತೆ ತುಂಬಾ ಇದೆ. ನಮಗೆ ಯಾರೋ ನ್ಯಾಯ ಕೊಡಿಸುತ್ತಾರೆ, ಉದ್ದಾರ ಮಾಡುತ್ತಾರೆ ಎಂಬ ಹಗಲುಗನಸು ಕಾಣದೆ ಸ್ವತಃ ನ್ಯಾಯ ಪಡೆಯಲು ಸ್ವಾವಲಂಬಿ ಹೋರಾಟ ರೂಪಿಸಿಕೊಳ್ಳಬೇಕು” ಎಂದರು.

ಸಿ ಕೆ ಮಂಜುನಾಥ ಮಾತನಾಡಿ ಈಗಿನ ವಾಸ್ಥವಿಕ ಪರಿಸ್ಥಿತಿಯಲ್ಲಿ ಅಲಮಾರಿಗಳಲ್ಲಿ ಎಸ್ಸಿ ಎಸ್ಟಿ ಒಬಿಸಿ ಸೇರಿದಂತೆ ರಾಜ್ಯಮಟ್ಟದಲ್ಲಿ ಒಟ್ಟು ಏಳು ಸಂಘಟನೆಗಳು ಇದ್ದು ಅವೆಲ್ಲವೂ ಒಂದೇ ವೇದಿಕೆಯಲ್ಲಿ ಅಲೆಮಾರಿಗಳ ಶ್ರೇಯಾ ಅಭಿವೃದ್ಧಿಗೆ ಶ್ರಮಿಸಲು ಒಟ್ಟುಗೂಡಿ ಸಮನ್ವ ಸಮಿತಿ ರೂಪಿಸಿರುವುದು ಒಳ್ಳೆಯ ಬೆಳವಣಿಗೆ ಮತ್ತು ಅಲೆಮಾರಿಗಳು ಸಾಮಾಜಿಕ ಆರ್ಥಿಕ ರಾಜಕೀಯವಾಗಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆಯಲು ಸುಲಭವಾಗಿ ಸಮನ್ವಯ ಸಮಿತಿಯು ಕೆಲಸ ಮಾಡಲಿದೆ ಒಟ್ಟಾರೆ ಅಲೆಮಾರಿಗಳೆಲ್ಲಾ ಒಂದೇ ವೇದಿಕೆಯಡಿ ಬಂದು ತಮ್ಮದೇ ಸ್ವಂತ ಹೋರಾಟ ರೂಪಿಸಿಕೊಂಡು ಸವಲತ್ತನ್ನು ಸಮುದಾಯಗಳಿಗೆ ಕೊಡಿಸಲು ಮುಂದಾಗಿರುವುದು ಹರ್ಷದ ಸಂಗತಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net