

ಬೆಂಗಳೂರು: ದೃಷ್ಟಿ ಭ್ರಮೆ ಉಂಟು ಮಾಡುವ ಅದೆಷ್ಟೋ ಚಿತ್ರಗಳು ಆಗಾಗ ಸಿಗುತ್ತವೆ. ಇಂಥ ಫೋಟೋಗಳು ನಮ್ಮ ಕಣ್ಣುಗಳಿಗೆ ಸವಾಲು ನೀಡುತ್ತವೆ. ಆದರೆ ನಾವು ಇಂದು ನಿಮಗೆ ತೋರಿಸುವ ಚಿತ್ರ ನಿಮ್ಮ ವ್ಯಕ್ತಿತ್ವದ ಕುರಿತಾಗಿ ಮಾಹಿತಿ ನೀಡುತ್ತದೆ.
ಯುವತಿ, ಮಹಿಳೆಯನ್ನೇ ನೋಡಿದರೆ: ಮಹಿಳೆಯನ್ನೇ ಮೊದಲು ನೋಡಿದರೆ ಸೌಂದರ್ಯದ ಬಗ್ಗೆ ಕಾಳಜಿಯನ್ನು ಹೊಂದಿರುವರಾಗಿರುತ್ತಾರೆ.
ಪುರುಷರು ಮಹಿಳೆಯನ್ನು ನೋಡಿದರೆ: ಒಬ್ಬ ಪುರುಷ ಈ ಚಿತ್ರವನ್ನು ನೋಡಿ ಮೊದಲು ಮಹಿಳೆಯನ್ನು ಗಮನಿಸಿದರೆ ಅತ್ಯುತ್ತಮ ಸಂಗಾತಿಯನ್ನು ಹುಡುಕಾಟ ಮಾಡುತ್ತಿದ್ದಾರೆ. ಈಗಾಗಲೇ ಸಂಗಾತಿ, ಪ್ರಿಯತಮೆಯನ್ನು ಹೊಂದಿರುವವರಾಗಿದ್ದರೆಂದು ಅರ್ಥವಾಗುತ್ತದೆ.
ಯುವಕನಾಗಿದ್ದು ಪುರುಷನನ್ನು ನೋಡಿದರೆ: ಪುರುಷನನ್ನೇ ಮೊದಲು ಗಮನಿಸಿದರೆ, ನೀವು ನಿಮ್ಮ ಸ್ನೇಹಿತರ ಜತೆಗಿನ ಸಂಬಂಧದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ.
ದಂಪತಿ ಈ ಪರೀಕ್ಷೆಯನ್ನು ಒಟ್ಟಿಗೆ ಪ್ರಯತ್ನಿಸಬಹುದು, ಅಥವಾ ನೀವು ಅದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದು ಅಥವಾ ಸಂಬಂಧದಲ್ಲಿರುವಾಗ ನಿಮ್ಮ ಸ್ವಂತ ವ್ಯಕ್ತಿತ್ವವನ್ನು ನೀವೆ ಪರೀಕ್ಷಿಸಬಹುದು.