

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೃಷ್ಟಿಭ್ರಮ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ನಿಮ್ಮ ಮುಂದೆ ಇರುವ ಸವಾಲು ಏನು? : ಮೇಲಿನ ಫೋಟೋ ಗಮನಿಸಿ.? ಹೇಗೆ ನೋಡಿದರೂ ’8’ ಎಂಬ ಸಂಖ್ಯೆ ಕಾಣುವಂತಿದೆ. ಹೌದು.. ನಿಮ್ಮ ಅನಿಸಿಕೆ ಸರಿ.. ಆದರೆ ಅಲ್ಲಿ ಇನ್ನೊಂದು ನಂಬರ್ ಕೂಡ ಅಡಗಿದೆ. ಅದು '3' ಸಂಖ್ಯೆ. ಅದನ್ನು ಕಂಡುಹಿಡಿಯುವುದು ನಿಮ್ಮ ಮುಂದಿರುವ ಕೆಲಸ. ಆ ನಂಬರ್ ಅನ್ನು ಪತ್ತೆ ಮಾಡುವುದು ನಿಮಗೆ ಅಷ್ಟು ಸುಲಭವಲ್ಲ.
ಹತ್ತಿರದಿಂದ ನೋಡಿ. ನಿಮ್ಮ ಕಣ್ಣುಗಳಿಗೆ ಕೆಲಸ ಕೊಡಿ.. ನೀವು ಆ ಸಂಖ್ಯೆಯನ್ನು ಸುಲಭವಾಗಿ ಕಂಡುಕೊಳ್ಳುತ್ತೀರಿ. 90 ರಷ್ಟು ಜನರು ಈ '3' ಸಂಖ್ಯೆಯನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ. ಯಾಕೆ ತಡ.. ಒಮ್ಮೆ ಟ್ರೈ ಮಾಡಿ ನೋಡಿ.. ಸಿಗದಿದ್ದರೆ ಚಿಂತೆ ಬೇಡ.. ಎಂಬ ಉತ್ತರವನ್ನು ಫೋಟೋ ಕೆಳಗೆ ಕೊಟ್ಟಿದ್ದೇವೆ.