SSLCಯಲ್ಲಿ ನಟ ದರ್ಶನ್​​ ಪಡೆದ ಅಂಕ ಎಷ್ಟು ಗೊತ್ತಾ? ದಾಸನೇ ಬಿಚ್ಚಿಟ್ಟ ಅಸಲಿ ಸತ್ಯ ಇದು…

ಬೆಂಗಳೂರು: ಸ್ಟಾರ್​ ನಟ, ನಟಿಯರ ಜೀವನ, ಲೈಫ್​ಸ್ಟೈಲ್​. ಮನೆ, ಮಕ್ಕಳು ಸಿನಿಮಾ ಹಾಗೂ ವೈಯಕ್ತಿಕ ಜೀವದ ಕುರಿತಾಗಿ ತಿಳಿದುಕೊಳ್ಳಲು ಫ್ಯಾನ್ಸ್​​ ಕಾಯುತ್ತಿರುತ್ತಾರೆ. ಹೀಗೆ ಕಾಯುತ್ತಿರುಗ ಫ್ಯಾನ್ಸ್​​ಗೆ ಸ್ಯಾಂಡಲ್​ವುಡ್​​ ನಟ ದರ್ಶನ್​​ ಅವರು ಈ ಹಿಂದೆ ತಮ್ಮ ಶಿಖ್ಷಣದ ಕುರಿತಾಗಿ ಮಾಹಿತಿ ನೀಡಿದ್ದು ಇದೀಗ ವೈರಲ್​ ಆಗಿದೆ. ಬನ್ನಿ ದರ್ಶನ್​​ ಅವರು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಯಾವೆಲ್ಲ ಸಿಕ್ರೆಟ್​​ ಬಿಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದುಕೊಳ್ಳೋಣ….

ದರ್ಶನ್ ‘ಕ್ರಾಂತಿ’ ಸಿನಿಮಾ ಮಾಡಿದ್ದರು. ಈ ಸಿನಿಮಾ ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ ಹೊತ್ತಿತ್ತು. ಇದೇ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಸರ್ಕಾರಿ ಶಾಲೆಯಲ್ಲಿಯೇ ಓದಿರುವ ಬಗ್ಗೆ, ಎಸ್‌ಎಸ್ಎಲ್‌ಸಿ ಪಡೆದ ಅಂಕ ಎಷ್ಟು ಅನ್ನೋದನ್ನು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.

ದರ್ಶನ್​​ ಮಾತನಾಡಿ, “ನಾನು ಮೈಸೂರಿನಲ್ಲಿ ಸರ್ಕಾರಿ ಶಾಲೆಯಲ್ಲೇ ಓದಿದ್ದೇನೆ. ಮೊದಲು ಟೆರೇಸಿಯನ್ ಸ್ಕೂಲ್‌ನಲ್ಲಿ ಓದಿದೆ. ಜೆಎಸ್‌ಎಸ್‌ ಒಂದು ವರ್ಷ ಓದಿದೆ. ಆ ಮೇಲೆ ವೈಶಾಲಿಯಲ್ಲಿ ಓದಿದೆ. 10ನೇ ತರಗತಿವರೆಗೂ ಮೈಸೂರಿನಲ್ಲೇ ಓದಿದ್ದು, 10ನೇ ತರಗತಿನೇ ಕೊನೆ ಎಂದಿದ್ದರು.

ನಾನು ತುಂಬಾನೇ ಅವರೇಜ್ ಸ್ಟುಡೆಂಟ್ ಇದೆ. ಏನಾದ್ರು ಒಂದು ಕಾರಣಕ್ಕೆ ಕ್ಲಾಸ್‌ನಿಂದ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿ ನಾನು ಆಗಿದ್ದೇನು. ಒಂದು ವಿಷಯ ಅಂತಲ್ಲ. ಎಲ್ಲದನ್ನು ನೋಡಿದರೂ ಓಡಿ ಹೋಗೋಣ ಅಂತ ಅನಿಸುತ್ತಿತ್ತು. ಕ್ಲಾಸ್‌ನಿಂದ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿನೇ ನಾನು ಎಂದು ಹೇಳಿದ್ದರು.

10ನೇ ತರಗತಿಯ ನನ್ನ ಮಾರ್ಕ್ಸ್ 210. ಅವಾಗೆಲ್ಲಾ 35, 35.. ಅಲ್ಲದೆ ಹಿಂದಿಗೆ 80 ಮಾರ್ಕ್ಸ್ ಇತ್ತು. ಎಲ್ಲಾ ಒಟ್ಟು ಸೇರಿಸಿದರೆ, 210 ಮಾಕ್ಸ್. ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕಾನಿಕಲ್ ಡಿಪ್ಲೊಮಾಗೆ ಹಾಕಿದ್ರು. ಜೆಎಸ್‌ಎಸ್‌ ಪಾಲಿಟಿಕ್ಸ್‌ನಲ್ಲಿ ಸೇರಿಸಿದ್ರು. 6 ತಿಂಗಳು ಹೋಗಿ ನಂತರ ಅಲ್ಲಿಗೆ ಬಿಟ್ಟೆ. 10ನೇ ತರಗತಿಯೇ ಕೊನೆ ಆಯ್ತು ಎಂದಿದ್ದಾರೆ. ಕಾಂತ್ರಿ ಸಿನಿಮಾ ಪ್ರಚಾರ ಸಮಯದಲ್ಲಿ ಹೇಳಿದ್ದ ಈ ಸ್ಟೋರಿ ಇಂದು ಸಖತ್​ ವೈರಲ್​​ ಆಗುತ್ತಿದೆ.

ಶಿವಣ್ಣನ​ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಐಶ್ವರ್ಯ ರೈ ಪುತ್ರಿ! ಆರಾಧ್ಯ ಬಚ್ಚನ್ ಸಂಸ್ಕೃತಿ ಮೆಚ್ಚಿದ ಫ್ಯಾನ್ಸ್​

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…