ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು 7ಸೆಕೆಂಡುಗಳಲ್ಲಿ ಹುಡುಕಿ

Optical Illusion Solution
Published on

ಬೆಂಗಳೂರು: ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು  ಪ್ರಯೋಜನಕಾರಿಯಾಗಿದೆ.

ನಿಮಗೆ ಇರುವ ಸವಾಲು: ಈ ಮೇಲಿನ ಚಿತ್ರವು ಹಿತ್ತಲಿನಲ್ಲಿ ಇಟ್ಟಿರುವ ನೂರಾರು ಮರದ ದಿಮ್ಮಿಗಳನ್ನು ತೋರಿಸುತ್ತದೆ. ಈಗ ನಿಮಗೆ ಮೊದಲ ನೋಟದಲ್ಲಿ ಮರದ ದಿಮ್ಮಿಗಳನ್ನು ಹೊರತುಪಡಿಸಿ ಚಿತ್ರದಲ್ಲಿ ಬೇರೇನೂ ಇಲ್ಲ ಎಂದು ಕಾಣಿಸುತ್ತದೆ. ಆದರೆ ಒಮ್ಮೆ ನೀವು ಈ ಫೋಟೋವನ್ನು ಸರಿಯಾಗಿ ನೋಡಿದಾಗ, ಚಿತ್ರದಲ್ಲಿ ಮುದ್ದಾದ ನಾಯಿ ಮರಿಯೊಂದು ಕಾಣಿಸುತ್ತದೆ. ಈಗ, ನಿಮ್ಮ ಸಮಯ ಶುರುವಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ನೀವು ಈ ಸವಾಲನ್ನು ಗೆಲ್ಲಲು ಸಾಧ್ಯವಾಗುತ್ತದೆ.

Optical Illusion Solution

ನಿಮಗಾಗಿ ಒಂದು ಸಹಾಯ ಮಾಡುತ್ತೇವೆ. ಇಲ್ಲಿ ಅಡಗಿರುವ ನಾಯಿ ಮರದ ದಿಮ್ಮಿಗಳ ಬಣ್ಣವನ್ನೇ ಹೊಂದಿದೆ. ನಿಮ್ಮ ಸಮಯ ಮುಗಿದಿದೆ. ಉತ್ತರ ಸಿಕ್ಕಿದ್ದರೆ ಅಭಿನಂದನೆ. ನಿಮಗೆ ನಾಯಿ ಮರಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ, ಬನ್ನಿ ನಾವು ನಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಫೋಟೋದಲ್ಲಿ ನಾಯಿ ಇರುವ ಸ್ಥಳದ ಕುರಿತಾಗಿ ಮಾಹಿತಿ ಇದೆ.

Optical Illusion Solution

ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net