ಕಲಾ ಕನಸುಗಾರನಿಗೆ ಜಗದಗಲ ಕ್ಯಾನ್ವಾಸ್!: ಆಕಾಶದಷ್ಟು ಅವಕಾಶ..

Ramesh Chavan
Published on

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!

| ರಮೇಶ್ ಚವ್ಹಾಣ್ ಕಲಾ ಸಂಘಟಕ, ವಿಜಯಪುರ

ಚಿತ್ರಕಲಾ ಕ್ಷೇತ್ರ ಹಾಗೂ ಕಲಾ ಸಂಘಟನೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕೋವಿಡ್​ನಿಂದ ಸ್ವಲ್ಪ ಕುಂಠಿತವಿದ್ದರೂ ಈಗ ಚೇತರಿಕೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಸಂಘಟನೆಯ ಕೊರತೆ ಇದೆ. ಕಲಾವಿದರು ಒಂದಾಗಿ ಸಂಘಟನೆ ಮಾಡಿ ಕಲಾಮೇಳಗಳನ್ನು ಸಂಘಟಿಸಿದರೆ ಅನುಕೂಲವಾಗುತ್ತದೆ. ಕಲಾವಿದರು ಗ್ಯಾಲರಿಯಲ್ಲಿ ಕೂತು ಚಿತ್ರಗಳನ್ನು ರಚನೆ ಮಾಡಬಹುದು. ಅವು ಜನರನ್ನು ಸೆಳೆಯಬೇಕಾದರೆ ಹಾಗೂ ಕಲಾವಿದರಿಗೆ ಲಾಭ ತಂದುಕೊಡಬೇಕಾದರೆ ಕಲಾಮೇಳ, ಪ್ರದರ್ಶನ ಅತ್ಯಂತ ಮುಖ್ಯ. ರಾಜ್ಯದ ದಕ್ಷಿಣ ಭಾಗ ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಆಗುತ್ತಿವೆ. ಆದರೆ ಉತ್ತರ ಕರ್ನಾಟಕದಲ್ಲಿಯೂ ಹೆಚ್ಚು ಸಂಘಟನೆ ಮಾಡಲು ಅವಕಾಶಗಳಿವೆ. ಸಂಘಟನೆ ಎಂಬುದು ಒಬ್ಬರಿಂದ ಆಗುವ ಕೆಲಸವಲ್ಲ. ಒಂದು ಸಂಸ್ಥೆ ಮಾಡಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಗಳನ್ನು ಮಾಡಬಹುದು. ಆನ್​ಲೈನ್​ನಲ್ಲಿಯೂ ಮಾಡುವ ಅವಕಾಶಗಳಿವೆ. ಗ್ಯಾಲರಿಗಳನ್ನು ಸ್ಥಾಪಿಸಿಕೊಂಡರೂ ಅಲ್ಲಿ ಕಲಾವಿದರಿಗೆ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಹುದು. ಆ ಮೂಲಕವೂ ಕಲಾವಿದರಿಗೆ ಮಾರುಕಟ್ಟೆ ಒದಗಿಸಬಹುದು. ಕಲಾ ಸಂಘಟನೆಯಲ್ಲಿ ಲಾಭದ ಉದ್ದೇಶ ಮಾತ್ರವಲ್ಲದೇ ಸಮಾಜಕ್ಕೂ ಉತ್ತಮ ಸಂದೇಶವನ್ನು ರವಾನೆ ಮಾಡಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net