ಸ್ಮಾರ್ಟ್​ವರ್ಕ್​ನಿಂದ ಸ್ಮಾರ್ಟಾಗಿ: ಆಕಾಶದಷ್ಟು ಅವಕಾಶ..

PC Srinivas
Published on

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.

| ಪಿ.ಸಿ. ಶ್ರೀನಿವಾಸ ಸಿಇಒ, ‘ಇಂಡಿಯಾ ಫಾರ್ ಐಎಎಸ್’ ಅಕಾಡೆಮಿ, ಬೆಂಗಳೂರು

ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ಕೊಡುವುದರಲ್ಲಿ ನಿರತವಾಗಿವೆ. ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುವುದರಲ್ಲಿ ನಿರತವಾಗಿದ್ದಾರೆ. ಆದರೆ ಸ್ಪರ್ಧಾತ್ಮಕತೆ ಕಡೆಗೆ ಗಮನವಿಲ್ಲ. ಕರ್ನಾಟಕದ ಯುವಜನತೆಯಲ್ಲಿ ಸ್ಪರ್ಧಾತ್ಮಕ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಪ್ರೋತ್ಸಾಹಿಸುವುದು ಅನಿವಾರ್ಯ. ಅದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಇಲ್ಲವಾದರೆ, ನಮ್ಮ ಅತಿ ದೊಡ್ಡ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಧ್ವನಿ ದುರ್ಬಲವಾಗುವುದರಲ್ಲಿ ಸಂದೇಹವಿಲ್ಲ. ಲಕ್ಷಾಂತರ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಬರೆಯುತ್ತಾರೆ. ಆದರೆ, ಇಲ್ಲಿ ಯಶಸ್ಸಿನ ಪ್ರಮಾಣ ಬಹಳ ಕಮ್ಮಿ ಇದೆ. ಆದರೆ, ಉತ್ತೀರ್ಣರಾಗಿಲ್ಲವೆಂದು ಹತಾಶರಾಗಿ ಕುಳಿತುಕೊಳ್ಳುವ ಬದಲು ಜ್ಞಾನ ಮತ್ತು ನೈಪುಣ್ಯವನ್ನು ವ್ಯರ್ಥವಾಗದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾದವರು ಬೇರೆ ಸಣ್ಣಪುಟ್ಟ ಪರೀಕ್ಷೆ ಎದುರಿಸುವುದು ದೊಡ್ಡ ಕಷ್ಟವೇನಲ್ಲ. ಒಂದು ಬ್ಯಾಕ್​ಅಪ್​ನಲ್ಲಿ ಅವಕಾಶಗಳನ್ನಿಟ್ಟು ಸಿದ್ಧತೆ ನಡೆಸುವುದು ಉತ್ತಮ. ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದ ಜತೆಗೆ ಸ್ಮಾರ್ಟ್ ವರ್ಕ್ ಕೂಡ ಮುಖ್ಯವಾಗಲಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net