

ಬಳ್ಳಾರಿ: ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಟಿ.ರಾಮಕ್ಕ ಮತ ಚಲಾಯಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಟಿ. ರಾಮಕ್ಕ ಸ್ಪರ್ಧಿಸಿದ್ದಾರೆ.
ಟಿ.ರಾಮಕ್ಕ, ಬಾದನಟ್ಟಿ ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ. ಈ ಸಂದರ್ಭ ಅವರು "ನಾನು ಈ ಬಾರಿ ಅಭ್ಯರ್ಥಿಯಾಗಿದ್ದೀನಿ. ನಮ್ಮದು ಬಡ ಪಕ್ಷ, ಬಡವರ ಸೇವೆ ಮಾಡಲು ಸ್ಪರ್ಧಿಸಿರುವೆ. ಜನರು ನನಗೆ ಮತ ನೀಡುತ್ತಾರೆ ಅಂತಾ ವಿಶ್ವಾಸವಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.