ಕೊನೆಗೆ ಟಿಎಂಸಿಯಲ್ಲಿ ಉಳಿಯೋದು ಮಮತಾ ಬ್ಯಾನರ್ಜಿ ಮಾತ್ರ: ಭವಿಷ್ಯ ನುಡಿದ ಅಮಿತ್ ಷಾ

Amit Shah
Published on

ಕೋಲ್ಕತ: ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷದವರು ಬಿಜೆಪಿಗೆ ಸೇರುತ್ತಿರುವ ಚಿಂತೆಯಲ್ಲಿರುವ ಮಮತಾ ಬ್ಯಾನರ್ಜಿಗೆ ಈಗ ಕೇಂದ್ರ ಸಚಿವ ಅಮಿತ್ ಷಾ ಮಾತಲ್ಲಿ ಚಾಟಿಯೇಟು ನೀಡಿದ್ದಾರೆ. ಮಾತ್ರವಲ್ಲ ತೃಣಮೂಲ ಕಾಂಗ್ರೆಸ್​ ಮುಂದೇನಾಗಲಿದೆ ಎಂಬ ಭವಿಷ್ಯವನ್ನೂ ಅಮಿತ್ ಷಾ ನುಡಿದಿದ್ದಾರೆ.

ಟಿಎಂಸಿಯಿಂದ ಬಿಜೆಪಿಗೆ ಬಂದು ಸೇರುತ್ತಿರುವ ಪರಿಯನ್ನು ನೋಡಿದರೆ ಬಂಗಾಳದಲ್ಲಿ ಚುನಾವಣೆ ನಡೆಯುವ ಹೊತ್ತಿಗೆ ಮಮತಾ ಬ್ಯಾನರ್ಜಿ ಹಿಂದಿರುಗಿ ನೋಡಿದರೆ ಪಕ್ಷದಲ್ಲಿ ಅವರೊಬ್ಬರೇ ಉಳಿದಿರುತ್ತಾರೆ ಎಂದು ಅಮಿತಾ ಷಾ ಟಾಂಗ್ ನೀಡಿದ್ದಾರೆ. ಭಾನುವಾರ ನಡೆದ ಟಿಎಂಸಿ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಬಂಗಾಳದಲ್ಲಿನ ರಾಜಕೀಯ ಬೆಳವಣಿಗೆಯನ್ನು ಈ ರೀತಿ ವ್ಯಾಖ್ಯಾನಿಸಿದರು.

ಟಿಎಂಸಿಯ ಐವರು ಮಾಜಿ ನಾಯಕರು ಶನಿವಾರ ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್​ ಷಾ ಅವರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದಾರೆ. ಮಾಜಿ ಸಚಿವ ರಜಿಬ್​ ಬ್ಯಾನರ್ಜಿ, ಬಾಲಿ ಕ್ಷೇತ್ರದ ಶಾಸಕ ಬೈಶಾಲಿ ದಾಲ್ಮಿಯಾ, ಉತ್ತರಪರಾದ ಶಾಸಕ ಪ್ರಬೀರ್​ ಘೋಶಾಲ್​, ಹೌರಾ ಮೇಯರ್​ ರಾಥಿನ್​ ಚಕ್ರಬೂರ್ತಿ ಮತ್ತು ರಾಬಾಘಾಟ್​ನ ಮಾಜಿ ಶಾಸಕ ಪಾರ್ಥಸಾರಥಿ ಚಟರ್ಜಿ ಶುಕ್ರವಾರವಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net