More

    ಸಿಎಂ ಮಮತಾಗೆ ಶಾಕ್​: ಮತ್ತೆ ಐವರು ಟಿಎಂಸಿ ನಾಯಕರು ಅಮಿತ್​ ಷಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

    ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷದ ನಾಯಕರ ವಲಸೆ ಮುಂದುವರಿದಿದ್ದು, ಟಿಎಂಸಿಯ ಐವರು ಮಾಜಿ ನಾಯಕರು ಶನಿವಾರ ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್​ ಷಾರನ್ನು ಭೇಟಿ ಮಾಡಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದಾರೆ.

    ಏಪ್ರಿಲ್​-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಭಾನುವಾರ ಕೋಲ್ಕತದ ಹೌರಾದಲ್ಲಿ ನಡೆಯಬೇಕಿದ್ದ ಸಮಾವೇಶದಲ್ಲಿ ಷಾ ಪಾಲ್ಗೊಳ್ಳಬೇಕಾಗಿತ್ತು. ಇದೇ ಸಮಾವೇಶದಲ್ಲಿ ಐವರು ನಾಯಕರು ಬಿಜೆಪಿ ಸೇರಲಿದ್ದರು. ಆದರೆ, ಷಾ ಅವರ ಕೋಲ್ಕತ ಭೇಟಿ ರದ್ದಾಗಿದೆ.

    ಹೀಗಾಗಿ ಟಿಎಂಸಿ ನಾಯಕರು ಷಾರನ್ನು ಶನಿವಾರ ದೆಹಲಿ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಬಂಗಾಳ ಬಿಜೆಪಿ ನಾಯಕರಾದ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯವರ್ಗಿಯಾ ಅವರು ಐವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆಂದು ಘೋಷಿಸಿದರು.

    ಶುಕ್ರವಾರವಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ ಮಾಜಿ ಸಚಿವ ರಜಿಬ್​ ಬ್ಯಾನರ್ಜಿ, ಬಾಲಿ ಕ್ಷೇತ್ರದ ಶಾಸಕ ಬೈಶಾಲಿ ದಾಲ್ಮಿಯಾ, ಉತ್ತರಪರಾದ ಶಾಸಕ ಪ್ರಬೀರ್​ ಘೋಶಾಲ್​, ಹೌರಾ ಮೇಯರ್​ ರಾಥಿನ್​ ಚಕ್ರಬೂರ್ತಿ ಮತ್ತು ರಾಬಾಘಾಟ್​ನ ಮಾಜಿ ಶಾಸಕ ಪಾರ್ಥಸಾರಥಿ ಚಟರ್ಜಿ ಶನಿವಾರ ಷಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

    ನಿಗದಿಯಂತೆ ಹೌರಾದ ದುಮುರ್ಜೋಲಾದಲ್ಲಿ ಬಿಜೆಪಿಯ ಬೃಹತ್​ ಸಮಾವೇಶ ನಡೆಯಲಿದ್ದು, ಅಮಿತ್​ ಷಾ ಅವರು ವರ್ಚುವಲ್​ ಆಗಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಜವಳಿ ಉದ್ಯಮ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಇತರೆ ರಾಜ್ಯ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಕೆಲವು ಕಾರ್ಯತಂತ್ರಗಳ ಬಗ್ಗೆ ಮಾತನಾಡಲಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಮದುವೆಗೆ ಬಟ್ಟೆ ಖರೀದಿಸಲು ತೆರಳಿದ ವಧುವನ್ನು ಮಾರ್ಗ ಮಧ್ಯೆಯೇ ಹೊತ್ತೊಯ್ದ ಜವರಾಯ!

    ಪ್ರೇಯಸಿ ಶವ ತಂದು ರಸ್ತೆಬದಿ ಎಸೆದ ಪ್ರಕರಣ: ಜ.26ರ ರಾತ್ರಿ ಹೋಟೆಲ್​ ರೂಮ್ ಘಟನೆ ಬಿಚ್ಚಿಟ್ಟ ಪ್ರಿಯಕರ!​

    ‘ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ’ ಅಂತ ವಾಟ್ಸ್ಯಾಪ್ ಮೆಸೇಜ್ ಮಾಡಿ ನೇಣಿಗೆ ಶರಣಾದ ಡಿಸಿಸಿ ಬ್ಯಾಂಕ್ ನಿರ್ದೇಶಕನ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts