More

    2 ರೂಪಾಯಿ ಷೇರು ಖರೀದಿಸಲು ಮುಗಿಬಿದ್ದ ಹೂಡಿಕೆದಾರರು: ಮೇ 21ಕ್ಕಿದೆ ಮಹತ್ವದ ಸಭೆ

    ಮುಂಬೈ: ಶುಕ್ರವಾರದಂದು ಬಿಸಿಲ್ ಪ್ಲಾಸ್ಟ್ ಲಿಮಿಟೆಡ್ (bisil plast Ltd) ಷೇರಿನ ಬೆಲೆ ರಾಕೆಟ್​ನಂತೆ ಏರುಗತಿಯಲ್ಲಿತ್ತು. ವಾರದ ಕೊನೆಯ ವಹಿವಾಟಿನ ದಿನದಂದು 2.82 ರೂ. ಮುಟ್ಟಿತು. ಹಿಂದಿನ ದಿನಕ್ಕೆ ಹೋಲಿಸಿದರೆ ಷೇರು ಬೆಲೆ ಶೇ. 9.73ರಷ್ಟು ಏರಿಕೆ ಕಂಡಿದೆ.

    ಕಳೆದ ಒಂದು ವಾರದಲ್ಲಿ ಷೇರುಗಳ ಬೆಲೆ ರಾಕೆಟ್‌ನಂತೆ ಏರುತ್ತಿದೆ. ಮೇ 18, 2023 ರಂದು, ಈ ಷೇರಿನ ಬೆಲೆಯು ರೂ 3.67 ರಷ್ಟಿತ್ತು, ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಆಗಸ್ಟ್ 2023 ರಂದು ಷೇರಿನ ಬೆಲೆ 1.43 ರೂ. ಇದ್ದು, ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 20.40 ಮತ್ತು ಕನಿಷ್ಠ ಬೆಲೆ 15 ಪೈಸೆ ಇದೆ.

    ಬಿಸಿಲ್ ಪ್ಲಾಸ್ಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 21 ಮೇ 2024 ರಂದು ನಿಗದಿಪಡಿಸಲಾಗಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಲಾಗಿದೆ. 2023-24ರ ಹಣಕಾಸು ವರ್ಷದ ಕಂಪನಿಯ ತ್ರೈಮಾಸಿಕ ಫಲಿತಾಂಶಗಳನ್ನು ಈ ಸಭೆಯಲ್ಲಿ ಪ್ರಕಟಿಸಲಾಗುವುದು. ಈ ಕಂಪನಿಯಲ್ಲಿ ಸಾರ್ವಜನಿಕ ಷೇರುಗಳ ಪಾಲು ಶೇಕಡಾ 99.96 ಎಂದು ಇದೆ. ಪ್ರವರ್ತಕರು ಕೇವಲ ಶೇಕಡಾ 0.04 ಪಾಲನ್ನು ಹೊಂದಿದ್ದಾರೆ.

    ಕಂಪನಿಯು ಸೆಪ್ಟೆಂಬರ್ 25, 1986 ರಂದು ಕಂಪನಿಗಳ ಕಾಯ್ದೆ, 1956 ರ ಅಡಿಯಲ್ಲಿ ಕಂಪನಿಗಳ ರಿಜಿಸ್ಟ್ರಾರ್​, ಗುಜರಾತ್​ ಮೂಲಕ ನೋಂದಾಯಿಸಲ್ಪಟ್ಟಿತು. ಇದನ್ನು ಬಿಸಿಲ್ ಪ್ಲಾಸ್ಟ್ ಪ್ರೈವೇಟ್ ಲಿಮಿಟೆಡ್ ಎಂದು ಗುರುತಿಸಲಾಗಿದೆ. 1992ರಲ್ಲಿ ಇದು ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತಿಸಲಾಯಿತು. ಇದರ ನಂತರ ಹೆಸರನ್ನು ಬದಲಿಸಿ ಬಿಸಿಲ್​ ಪ್ಲಾಸ್ಟ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು. ಮಾರ್ಚ್ 17, 2006 ರಂದು ಕಂಪನಿಯನ್ನು ಬಿಸ್ಲೇರಿ ಗುಜರಾತ್​ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. 7 ಏಪ್ರಿಲ್ 2008 ರಂದು ಇದನ್ನು ಬಿಸಿಲ್ ಪ್ಲಾಸ್ಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.

    ಈ ಕಂಪನಿಯು PET ಬಾಟಲಿಗಳು, ಜಾರ್‌ಗಳು ಮತ್ತು ಅದರ ಪೂರಕ ಉತ್ಪನ್ನವನ್ನು ಔಷಧೀಯ ಕಂಪನಿಗಳು, FMCG ಕಂಪನಿಗಳು, ಬಾಟ್ಲಿಂಗ್ ಕಂಪನಿಗಳು ಇತ್ಯಾದಿಗಳಿಗೆ ಪೂರೈಕೆ ಮಾಡುತ್ತದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts