More

    ರೂ. 76ರಿಂದ 20ಕ್ಕೆ ಕುಸಿದಿರುವ ಮುಖೇಶ್​ ಅಂಬಾನಿ ಷೇರು: ನಷ್ಟದಲ್ಲಿದ್ದ ಕಂಪನಿ ಲಾಭ ಮಾಡುತ್ತಿದ್ದಂತೆಯೇ ಬೇಡಿಕೆ

    ಮುಂಬೈ: ಮುಖೇಶ್ ಅಂಬಾನಿ ಅವರಿಗೆ ಕೆಲವು ಕಂಪನಿಗಳ ಷೇರುಗಳು ಪೆನ್ನಿ ವರ್ಗದಲ್ಲಿ ಬೀಳುತ್ತವೆ. ಈ ಷೇರುಗಳ ಬೆಲೆ ಕಡಿಮೆ ಮೊತ್ತದ್ದಾಗಿರುತ್ತವೆ. ಇತಹ ಒಂದು ಕಂಪನಿಯು ಹಾಥ್​ವೇ ಕೇಬಲ್​ ಆ್ಯಂಡ್​ ಡಾಟಾಕಾಂ ಲಿಮಿಟೆಡ್​ (Hathway Cable & Datacom Ltd). ಈ ಕಂಪನಿಯ ಷೇರಿನ ಬೆಲೆ ಈಗ 20 ರೂಪಾಯಿ ಮಟ್ಟದಲ್ಲಿದೆ. ಈ ಕಂಪನಿಯ ಮಾಲೀಕತ್ವವು ಮುಖೇಶ್ ಅಂಬಾನಿ ಮತ್ತು ರಿಲಯನ್ಸ್‌ಗೆ ಸೇರಿದೆ.

    ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರದಂದು ಈ ಷೇರುಗಳ ಬೆಲೆ ರೂ. 20.80 ಆಗಿತ್ತು. ಹಿಂದಿನ ದಿನಕ್ಕೆ ಹೋಲಿಸಿದರೆ, ಷೇರುಗಳು 1.71% ರಷ್ಟು ಏರಿಕೆಯಾಗಿದೆ. ಕಂಪನಿಯು ಮಾರ್ಚ್​ ತ್ರೈಮಾಸಿಕಲ್ಲಿ ಲಾಭ ಮಾಡಿದ್ದರಿಂದ ಷೇರಿಗೆ ಒಂದಿಷ್ಟು ಬೇಡಿಕೆ ಬಂದಿದೆ.

    ಫೆಬ್ರವರಿ 2024 ರಲ್ಲಿ ಷೇರು ಬೆಲೆ ರೂ 27.90 ರ ಮಟ್ಟವನ್ನು ಮುಟ್ಟಿತ್ತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮೇ 2023ರಲ್ಲಿ ಈ ಷೇರಿನ ಬೆಲೆ 13.10 ರೂ. ಆಗಿದ್ದು, ಇದು ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 76.40 ರೂ. ಹಾಗೂ ಕನಿಷ್ಠ ಬೆಲೆ ರೂ. 10.50 ಇದೆ.

    ಈ ಕಂಪನಿಯಲ್ಲಿ ಪ್ರವರ್ತಕರಾದ ರಿಲಯನ್ಸ್ ಇಂಡಸ್ಟ್ರೀಸ್​ ಶೇಕಡಾ 75ರಷ್ಟು ಪಾಲನ್ನು ಹೊಂದಿದೆ. ಸಾರ್ವಜನಿಕ ಷೇರುಗಳು 25 ಪ್ರತಿಶತ ಇವೆ. ಈ ಕಂಪನಿಯ ಪ್ರವರ್ತಕರು ರಿಲಿಯನ್ಸ್ ಇಂಡಸ್ಟ್ರೀಸ್ ವೆಂಚರ್ಸ್- ಜಿಯೋ ಕಂಟೆಂಟ್ ಡಿಸ್ಟ್ರಿಬ್ಯೂಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್, ಜಿಯೋ ಇಂಟರ್ನೆಟ್ ಡಿಸ್ಟ್ರಿಬ್ಯೂಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜಿಯೋ ಕೇಬಲ್ ಆ್ಯಂಡ್​ ಬ್ರಾಡ್‌ಬ್ಯಾಂಡ್ ಹೋಲ್ಡಿಂಗ್ಸ್ ಆಗಿವೆ.

    ಇತ್ತೀಚೆಗೆ ಈ ಕಂಪನಿಯ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಕಂಪನಿಯು 34.57 ಕೋಟಿ ರೂ. ಲಾಭ ಮಾಡಿದೆ. ಇದರ ಹಿಂದಿನ ಮಾರ್ಚ್ ತ್ರೈಮಾಸಿಕದಲ್ಲಿ 14.62 ಕೋಟಿ ರೂಪಾಯಿಗಳ ನಷ್ಟವನ್ನು ಕಂಪನಿ ಅನುಭವಿಸಿತ್ತು. ಮಾರ್ಚ್​ ತ್ರೈಮಾಸಿಕದಲ್ಲಿ ಕೇಬಲ್ ಟೆಲಿವಿಷನ್ ವಿಭಾಗದಿಂದ ಕಂಪನಿಯ ಆದಾಯ 330.62 ಕೋಟಿ ರೂ. ಇದೆ. ಬ್ರಾಡ್‌ಬ್ಯಾಂಡ್ ವಹಿವಾಟು 153.85 ಕೋಟಿ ರೂ. ಮತ್ತು ಸೆಕ್ಯುರಿಟೀಸ್ ವಹಿವಾಟಿನ ಆದಾಯ 8.90 ಕೋಟಿ ರೂ. ಇದೆ.

    ಈ ಕಂಪನಿಯು ಭಾರತದ ಅತಿ ದೊಡ್ಡ ಬಹು-ವ್ಯವಸ್ಥೆಯ ಆಪರೇಟರ್ (MSO) ಮತ್ತು ಕೇಬಲ್ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ.

     

    ಅದಾನಿ ಷೇರು ಬೆಲೆ ಕುಸಿತ: ಈಗ ಖರೀದಿಸಿ ಲಾಭ ಮಾಡಿಕೊಳ್ಳಲು ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts